-->

ಎಸ್ಐ - ಮಹಿಳಾ ಕಾನ್ಸ್​ಟೇಬಲ್ ನಡುವೆ ಅನೈತಿಕ ಸಂಬಂಧ: ಬಲಿಯಾಯಿತು ಬಡಜೀವ

ಎಸ್ಐ - ಮಹಿಳಾ ಕಾನ್ಸ್​ಟೇಬಲ್ ನಡುವೆ ಅನೈತಿಕ ಸಂಬಂಧ: ಬಲಿಯಾಯಿತು ಬಡಜೀವ


 ನಿಜಾಮಾಬಾದ್​: ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಜತೆ ಅನೈತಿಕ ಸಂಬಂಧ ಹೊಂದಿದ್ದ  ಪೊಲೀಸ್​ ಠಾಣೆಯ ಪ್ರೊಬೆಷನರಿ ಸಬ್​ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಲಾಗಿದೆ. 

ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಇಂದಾಲ್ವೈ ಪೊಲೀಸ್​ ಠಾಣೆಯ ಶಿವಪ್ರಸಾದ್​ ರೆಡ್ಡಿ ಅಮಾನಯುಗೊಂಡ ಎಸ್​ಐ.ಶಿವಪ್ರಸಾದ್​ ರೆಡ್ಡಿ ಕರೀಮ್​ನಗರ ಜಿಲ್ಲೆಯ ವೀಣವಂಕ ಮಂಡಲದ ನರ್ಸಿಂಗಪಲ್ಲಿ ಗ್ರಾಮದವರು. 2019ರ ಡಿಸೆಂಬರ್​ನಲ್ಲಿ ಇಂದಾಲ್ವೈ ಪೊಲೀಸ್​ ಠಾಣೆಗೆ ಪ್ರೊಬೆಷನರಿ ಸಬ್​ ಇನ್ಸ್​ಪೆಕ್ಟರ್ ನೇಮಕವಾಗಿದ್ದರು. ಶಿವಪ್ರಸಾದ್​ ರೆಡ್ಡಿ ವಿರುದ್ಧ ಅನೇಕ ಅಕ್ರಮ ಪ್ರಕರಣಗಳಿವೆ. 

 ಶಿವಪ್ರಸಾದ್​ ರೆಡ್ಡಿ ಮಹಿಳಾ ಕಾನ್ಸ್​ಟೇಬಲ್​ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಜಿಲ್ಲೆಯಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಮಹಿಳಾ ಕಾನ್ಸ್​ಟೇಬಲ್ ಪತಿ ಶಿವಾಜಿರಾವ್​ಗೆ ಈ ವಿಚಾರ ತಿಳಿದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕಾಮರೆಡ್ಡಿ ಜಿಲ್ಲೆಯ ಗಾಂಧಾರಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 ಮಹಿಳಾ ಕಾನ್ಸ್​ಟೇಬಲ್​ ಎ1 ಮತ್ತು ಎಸ್​ಐ ಶಿವಪ್ರಸಾದ್​ ರೆಡ್ಡಿ ಎ2 ಆರೋಪಿಗಳು. ಶಿವಾಜಿರಾವ್​ ಸಾವಿಗೆ ಆಕೆಯ ಪತ್ನಿ ಮತ್ತು ಎಸ್​ಐ ಕಾರಣವೆಂದು ಗ್ರಾಮಸ್ಥರು ಭಾರೀ ಆಕ್ರೋಶ ಹೊರಹಾಕಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಇದರ ನಡುವೆ ಎಸ್​ಐ ಶಿವಪ್ರಸಾದ್​ರನ್ನು ಅಮಾನತು ಮಾಡಿ ಪೊಲೀಸ್​ ಆಯುಕ್ತ ಕಾರ್ತಿಕೇಯ ಆದೇಶಿಸಿದ್ದಾರೆ. ಆರೋಪಿಗಳ ಮೇಲಿರುವ ಆರೋಪ ಸಾಬೀತಾದರೆ ಇಬ್ಬರು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಲಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99