ಮದುವೆ ಮನೆಯಲ್ಲಿ ಮೀನಿನ ತಲೆಗಾಗಿ ಹೊಡೆದಾಟ: 11 ಮಂದಿ ಆಸ್ಪತ್ರೆಗೆ ದಾಖಲು

 

ಪಟನಾ: ಮದುವೆ ಕಾರ್ಯಕ್ರಮದಲ್ಲಿ ವಧುವಿನ ಕಡೆಯ ವ್ಯಕ್ತಿಯೊಬ್ಬ ಮೀನಿನ ತಲೆ ತಂದು ಹಾಕುವಂತೆ ಹೊಡೆದಾಟ ನಡೆಸಿದ ಘಟನೆ ಬಿಹಾರದ ಗೋಪಾಲ್​ಗಂಜ್ ಗ್ರಾಮದಲ್ಲಿ ನಡೆದಿದೆ.

ಬಿಹಾರದ ಗೋಪಾಲ್​ಗಂಜ್ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವರನ ಮನೆಗೆ ದಿಬ್ಬಣ ತಂದು ಮದುವೆ ಮಾಡಿದ್ದ ವಧುವಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಊಟಕ್ಕೆಂದು ಕುಳಿತಿದ್ದರು. ಈ ವೇಳೆ ವಧುವಿನ ಕಡೆಯ ವ್ಯಕ್ತಿಯೊಬ್ಬ ಮೀನಿನ ತಲೆ ತಂದು ಹಾಕುವಂತೆ ಕೇಳಿದ್ದಾನೆ. ಆದರೆ ವರನ ಕಡೆಯಿಂದ ಊಟ ಬಡಿಸುವ ಕೆಲಸದಲ್ಲಿ ತೊಡಗಿಸಿಕೊಂಡವರು ಅದನ್ನು ತಂದು ಹಾಕುವುದಕ್ಕೆ ತಡವಾಗಿದೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ.

ಈ ಹೊಡೆದಾಟದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯ 11 ಜನರಿಗೆ ಗಾಯವಾಗಿದೆ. ಗಂಡು ಮತ್ತು ಹೆಣ್ಣಿನ ಕಡೆಯ 11 ಜನರಿಗೆ ಗಾಯವಾಗಿದೆ. ಅನೇಕರ ತಲೆ, ಕೈ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ 11 ಮಂದಿಯನ್ನೂ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.