ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು: ರೈಲಿನಲ್ಲಿ ಮದುವೆಯಾದ ಯುವ ಪ್ರೇಮಿಗಳು
ಭಿರ್ ಕುರ್ದ್ ಎಂಬ ಗ್ರಾಮದ ನಿವಾಸಿ ಆಶು ಕುಮಾರ್ ಹಾಗೂ ಅನು ಕುಮಾರಿ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯವರ ಒತ್ತಾಯದ ಮೇರೆಗೆ ಅನು ಕಿರಣಪುರ್ ಹಳ್ಳಿಯ ಬೇರೊಬ್ಬನ ಜೊತೆ ಕಳೆದ ಎರಡು ತಿಂಗಳ ಹಿಂದ ಮದುವೆ ಮಾಡಿಕೊಂಡಿದ್ದರು.
ಅನು ತನ್ನ ಇಷ್ಟದ ವಿರುದ್ಧ ನಡೆದ ಮದುವೆ ಧಿಕ್ಕರಿಸಿದ ತನ್ನ ಪ್ರಿಯತಮನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದಾಳೆ. ಆಶು ಕುಮಾರ್ ಹಾಗೂ ಆಕೆ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮದುವೆಯಾಗಿದ್ದಾರೆ.
ಈ ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅಶು ಕುಮಾರ್, ನಾವು ಊರಲ್ಲೇ ಇದ್ದರೆ ಮನೆಯವರು ಸುಮ್ಮನಿರುವುದಿಲ್ಲ ಎಂದು ಬೆಂಗಳೂರಿಗೆ ಹೋಗಲು ನಿರ್ಧರಿಸಿದೆವು. ರೈಲಿನಲ್ಲಿ ತನಗೆ ತಾಳಿ ಕಟ್ಟುವಂತೆ ಅನು ಬಹಳ ಒತ್ತಾಯ ಮಾಡಿದಳು. ಹೀಗಾಗಿ, ರೈಲಿನೊಳಗೆ ಮದುವೆಯಾದೆ ಎಂದು ತಿಳಿಸಿದ್ದಾನೆ.
ಇವರಿಬ್ಬರ ಮದುವೆ ಫೋಟೋಸ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.