-->

ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣ: ಆರೋಪಿಗಳ ವಶದಲ್ಲಿದ್ದ 7 ಯುವತಿಯರ ರಕ್ಷಣೆ

ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣ: ಆರೋಪಿಗಳ ವಶದಲ್ಲಿದ್ದ 7 ಯುವತಿಯರ ರಕ್ಷಣೆ

ಬೆಂಗಳೂರು: ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಬಳಿಕ ವಿಚಾರಣೆ ವೇಳೆ ಹಲವಾರು ಮಹತ್ತರವಾದ ಸುಳಿವುಗಳು ಲಭ್ಯವಾಗುತ್ತಿದೆ. ಇದೀಗ ಅವರು ಬಾಯಿಬಿಟ್ಟಂತೆ ಆರೋಪಿಗಳ ವಶದಲ್ಲಿದ್ದ 7 ಬಾಂಗ್ಲಾ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಆರೋಪಿಗಳು ನೀಡಿರುವ ಮಾಹಿತಿಯಂತೆ ಚನ್ನಸಂದ್ರ, ಕನಕನಗರದ ಮನೆಯೊಂದರಲ್ಲಿ ವಶದಲ್ಲಿರಿಸಲಾಗಿದ್ದ ಬಾಂಗ್ಲಾ ಮೂಲದ‌ 7 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ‌ 

ಆರೋಪಿಗಳು ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ಬಾಂಗ್ಲಾದಿಂದ ಕರೆ ತಂದಿದ್ದು, ಅವರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿ ಇರಿಸಿದ್ದರು. ಬಳಿಕ ಈ ಯುವತಿಯರನ್ನು ಬೆಂಗಳೂರು, ಕೇರಳ ಮುಂತಾದೆಡೆ ವೇಶ್ಯಾವಾಟಿಕೆ ನಡೆಸಲು ಬಳಸಿಕೊಳ್ಳುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. ಯುವತಿಯರನ್ನ ರಕ್ಷಿಸುವ ವೇಳೆ ಇನ್ನೂ ಹಲವು ನಕಲಿ ದಾಖಲೆಗಳು ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99