ಹಾಸಿಗೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೊದಲ ಪತ್ನಿ: ರಹಸ್ಯ ಬಿಚ್ಚಿಟ್ಟ ರಾಜ್ ಕುಂದ್ರಾ
Sunday, June 13, 2021
ಮುಂಬೈ: ಶಿಲ್ಪ ಶೆಟ್ಟಿ ಪತಿ ರಾಜ್ ಕುಂದ್ರಾ ಇಷ್ಟು ದಿನ ತಾವು ಮುಚ್ಚಿಟ್ಟುಕೊಂಡ ಬಂದಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ರಾಜ್‌ಕುಂದ್ರಾ ಅವರು, ತಮ್ಮ ಮೊದಲ ಪತ್ನಿ ಕವಿತಾರಿಗೆ ವಿಚ್ಛೇದನ ನೀಡಿ ನಂತರ ಶಿಲ್ಪಾ ಅವರನ್ನು ಮದುವೆಯಾಗಿದ್ದಾರೆ. ಕುಂದ್ರಾ ಅವರು ಕವಿತಾರಿಗೆ ವಿಚ್ಛೇದನ ನೀಡಿದ್ದ ಸಂದರ್ಭದಲ್ಲಿ ಈ ಡಿವೋರ್ಸ್‌ಗೆ ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದರು.
ಅದರೆ, ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜ್ ಕುಂದ್ರಾ, ಕವಿತಳ ಜತೆಗಿನ ಸಂಬಂಧ ಮುರಿದುಬೀಳಲು ಶಿಲ್ಪಾ ಕಾರಣವಲ್ಲ, ಬದಲಿಗೆ ಕವಿತಾ ನನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ನಮ್ಮ ತಾಯಿ ಕಣ್ಣಾರೇ ಕಂಡಿದ್ದರು. ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ ಅವರಿಬ್ಬರ ನಡುವಿನ ಮೊಬೈಲ್ ಸಂದೇಶಗಳನ್ನು ನೋಡಿದೆ. ಆಗ ಮೋಸ ಮಾಡುವುದು ತಿಳಿದಿದೆ, ಇದಕ್ಕಾಗಿ ವಿಚ್ಛೇದನ ಕೊಟ್ಟಿದ್ದೇನೆ ಎಂದಿದ್ದಾರೆ. ಇಷ್ಟು ವರ್ಷ ಯಾರಿಗೂ ಸತ್ಯ ಹೇಳಿರಲಿಲ್ಲ. ಈಗ ಮನಸ್ಸು ನಿರಾಳವಾಗಿದೆ ಎಂದಿದ್ದಾರೆ.