ಮಗಳಿಗೇ ಮಗು ಕರುಣಿಸಿದ ಪಾಪಿ ತಂದೆ!
Sunday, June 13, 2021
ಅಹಮದಾಬಾದ್: ಪಾಪಿ ತಂದೆಯೋರ್ವನು ಹೆತ್ತ ಮಗಳೊಂದಿಗೆ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿರುವ ಘಟನೆ ಗುಜರಾತ್ನ ಭಾವ್ನಗರ್ ಜಿಲ್ಲೆಯಲ್ಲಿ ನಡೆದಿದೆ. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋದ ಯುವತಿ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಳಿಕ ಈ ಕೃತ್ಯ ಬಯಲಾಗಿದೆ.
ಕೊಳಗೇರಿ ನಿವಾಸಿ 19 ವರ್ಷದ ಯುವತಿ ಜೂನ್ 9 ರಂದು ಅನಾರೋಗ್ಯದ ಪರಿಣಾಮ ಭಾವ್ನಗರ್ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿ ಆಕೆಯನ್ನು ತಪಾಸಣೆ ನಡೆಸಿದ ವೈದ್ಯರು ಗರ್ಭಿಣಿಯಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿ ದಾಖಲಾದ ಯುವತಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ಈ ಸಂದರ್ಭ ಮನೆಯಲ್ಲಿ ತಾಯಿ ಇಲ್ಲದಿರುವಾಗ ಹಾಗೂ ರಾತ್ರಿ ಮಲಗಿರುವ ಸಂದರ್ಭದಲ್ಲಿ ನಿರಂತರ ತನ್ನ ತಂದತೇ ಅತ್ಯಾಚಾರ ನಡೆಸಿರುವ ಬಗ್ಗೆ ತಿಳಿಸಿದ್ದಾಳೆ. ಇದೀಗ ಮಗಳ ಮೇಲೆಯೇ ಅತ್ಯಾಚಾರ ಮಾಡಿರುವ ಆರೋಪದಡಿ ಯುವತಿಯ ತಂದೆಯನ್ನು ಭಾವ್ನಗರ್ ಪೊಲೀಸರು ಬಂಧಿಸಿದ್ದಾರೆ.
ಯುವತಿಯ ತಂದೆ ದಿನಗೂಲಿ ಕಾರ್ಮಿಕನಾಗಿದ್ದು, ಈತನಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ದೊಡ್ಡ ಮಗಳು ಮತ್ತು ಪುತ್ರರೀರ್ವರು ಮದುವೆಯಾಗಿ, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈತ ಚಿಕ್ಕಮಗಳಾದ ಸಂತ್ರಸ್ತ ಯುವತಿ ಮತ್ತು ತನ್ನ ಪತ್ನಿಯೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.