-->

 ಕೈಗೆಟುಕುವ ಬೆಲೆಗೆ ಸಿಗಲಿದೆ ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ ಮೊಬೈಲ್- ಇದರ ವಿಶೇಷತೆ ಏನು?

ಕೈಗೆಟುಕುವ ಬೆಲೆಗೆ ಸಿಗಲಿದೆ ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ ಮೊಬೈಲ್- ಇದರ ವಿಶೇಷತೆ ಏನು?


ಬೆಂಗಳೂರು: ‘ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ’ ಎನ್ನುವ ಹೊಸ ಸ್ಮಾರ್ಟ್ ಫೋನ್ ಅನ್ನು ಒನ್‌ಪ್ಲಸ್‌ ಕಂಪನಿಯು ಗುರುವಾರ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯನ್ನು ಕಡಿಮೆ ಬೆಲೆಗೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ರೂಪಿಸಿರುವುದಾಗಿ ಕಂಪನಿ ತಿಳಿಸಿದೆ. ಇದರ ಬೆಲೆ ₹ 22,999 ರಿಂದ ಆರಂಭವಾಗುತ್ತದೆ. 

64ಎಂಪಿ ಟ್ರಿಪಲ್‌ ಕ್ಯಾಮೆರಾ, 90 ಹರ್ಟ್ಸ್‌ ಫ್ಲ್ಯುಯೆಡ್‌ ಅಮೊಎಲ್‌ಇಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರ್ಯಾಗನ್‌ 750ಜಿ 5ಜಿ ಪ್ರೊಸೆಸರ್, ಸುಧಾರಿತ ವಾರ್ಪ್‌ ಚಾರ್ಜ್‌ 30ಟಿ ಪ್ಲಸ್‌, ಆಕ್ಸಿಜನ್‌ ಒಎಸ್‌ 11, 4,500 ಎಂಎಎಚ್‌ ಬ್ಯಾಟರಿ 'ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ'ಯ ಪ್ರಮುಖ ವೈಶಿಷ್ಟ್ಯಗಳಾಗಿವೆ. ಈ ಆವೃತ್ತಿಯಲ್ಲಿ ನಾರ್ಡ್‌ ಎಸ್‌ಇ ಹೊಸ ಸೇರ್ಪಡೆಯಾಗಿದ್ದು, ಒನ್‌ಪ್ಲಸ್‌ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜತೆಗೆ ಬಳಕೆದಾರರ ನಿತ್ಯದ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಯಾವುದೇ ದರ ಶ್ರೇಣಿಯಲ್ಲಿಯೂ ಅತ್ಯುತ್ತಮ ಅನುಭವ ಕಟ್ಟಿಕೊಡಬಹುದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ ಎಂದು ಕಂಪನಿಯ ಸ್ಥಾಪಕ ಪೀಟ್‌ ಲಾವ್ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ತಿಳಿಸಿದರು. 

ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ ಹೊಸ ಸ್ಮಾರ್ಟ್ ಫೋನ್ ಜೂನ್‌ 23ರಿಂದ ಅಮೆಜಾನ್‌, ಒನ್‌ಪ್ಲಸ್‌ ಮತ್ತು ಫ್ಲಿಪ್‌ಕಾರ್ಟ್‌ ಜಾಲತಾಣಗಳಲ್ಲಿ, ಹಾಗೂ ಆಯ್ದ ರಿಟೇಲ್‌ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. 

ಒನ್‌ಪ್ಲಸ್‌ ಟಿವಿ ಯು1ಎಸ್: ಕಂಪನಿಯು ತನ್ನ ಸ್ಮಾರ್ಟ್‌ ಟಿವಿ ವಿಭಾಗದಲ್ಲಿ ನೂತನವಾಗಿ ಒನ್‌ಪ್ಲಸ್‌ ಟಿವಿ ಯು1ಎಸ್‌ ಅನ್ನು ಅನಾವರಣಗೊಳಿಸಿದೆ. 2020ರಲ್ಲಿ ಬಿಡುಗಡೆ ಮಾಡಿರುವ ಯು ಸರಣಿಯ ಮುಂದುವರಿದ ಭಾಗ ಇದಾಗಿದೆ. 4ಕೆ ಸಿನಿಮ್ಯಾಟಿಕ್ ಡಿಸ್‌ಪ್ಲೇ, ಸ್ಪಷ್ಟವಾದ ಆಡಿಯೊ, ಅಂಚು ರಹಿತ ಪ್ರೀಮಿಯಂ ವಿನ್ಯಾಸವು ಗ್ರಾಹಕರಿಗೆ ಉತ್ತಮ ಅನುಭವವನ್ನು ಕಟ್ಟಿಕೊಡಲಿದೆ ಎಂದು ಕಂಪನಿ ಹೇಳಿದೆ. ಸ್ಪೀಕ್‌ ನೌ ವೈಶಿಷ್ಟ್ಯ ಇದ್ದು, ರಿಮೋಟ್‌ ಅಗತ್ಯವಿಲ್ಲದೇ ಧ್ವನಿಯಿಂದಲೇ ಟಿವಿಯನ್ನು ನಿಯಂತ್ರಿಸಬಹುದಾಗಿದೆ. ಹೊಸ ಧ್ವನಿ ನಿಯಂತ್ರಿತ ವ್ಯವಸ್ಥೆಯು ಗೂಗಲ್‌ ಅಸಿಸ್ಟಂಟ್‌ ಜೊತೆ ತಡೆರಹಿತ ಸಂಪರ್ಕ ಹೊಂದಿರಲಿದೆ. ಒನ್‌ಪ್ಲಸ್‌ ವಾಚ್, ಒನ್‌ಪ್ಲಸ್‌ ಬಡ್ಸ್‌ ಮತ್ತು ಒನ್‌ಪ್ಲಸ್‌ ಬಡ್ಸ್‌ ಜೆಡ್‌ ಅನ್ನು ಸ್ಮಾರ್ಟ್‌ ಟಿವಿ ಜೊತೆ ಸಂಪರ್ಕಿಸಬಹುದಾಗಿದೆ.

ಇದರ ಜೊತೆಗಿನ ವಾಚ್‌ ಮೂಲಕವೇ ಟಿವಿಯನ್ನು ಆನ್‌ ಅಥವಾ ಆಫ್‌ ಮಾಡುವ, ಕಂಟೆಂಟ್‌ ಸ್ಕ್ರಾಲ್ ಮಾಡುವ, ವಾಲ್ಯುಂ ನಿಯಂತ್ರಿಸುವ ಹಾಗೂ ಇನ್ನಿತರ ಸೆಟ್ಟಿಂಗ್ಸ್‌ ಮಾಡಲು ಸಾಧ್ಯ. ಒನ್‌ಪ್ಲಸ್‌ ವಾಚ್‌ ಕಟ್ಟಿಕೊಂಡಿರುವವರು ಅರ್ಧಗಂಟೆಗೂ ಹೆಚ್ಚಿನ ಕಾಲ ಮಲಗೇ ಇದ್ದರೆ ಆಗ ಟಿವಿಯು ಸ್ವಯಂಚಾಲಿತವಾಗಿ ಆಫ್‌ ಆಗುವಂತೆ ಮಾಡುವ ಸ್ಮಾರ್ಟ್‌ ಸ್ಲೀಪ್‌ ಕಂಟ್ರೋಲ್ ವೈಶಿಷ್ಟ್ಯವೂ ಇದರಲ್ಲಿದೆ ಎಂದು ಕಂಪನಿ ತಿಳಿಸಿದೆ. 50 ಇಂಚು, 55 ಇಂಚು ಮತ್ತು 65 ಇಂಚುಗಳಲ್ಲಿ ಈ ಸ್ಮಾರ್ಟ್‌ ಟಿವಿ ಲಭ್ಯವಿದೆ. ಬೆಲೆಯು ₹ 39,999 ರಿಂದ ಆರಂಭವಾಗುತ್ತದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99