ಮನೆಬಿಟ್ಟು ಹೋದ ಪತ್ನಿ: ಠಾಣೆಯ ಮೆಟ್ಟಿಲೇರಿದ ಪತಿ
Wednesday, June 23, 2021
ಹೈದರಾಬಾದ್: ಪತ್ನಿಯೊಬ್ಬಳು ಹೇಳದೆ ಕೇಳದೆ ಮನೆಬಿಟ್ಟು ಹೋಗಿರುವ ಬಗ್ಗೆ ಪತಿ ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಜುಬಿಲಿ ಹಿಲ್ಸ್ ರೋಡ್ ನಂಬರ್ 100 ಸಿ ಗಾಯಿತ್ರಿ ಹಿಲ್ಸ್ ನಿವಾಸಿ ದಿವ್ಯಾ(21) ನಾಪತ್ತೆಯಾದವರು.
ಸಿ.ಎಚ್. ಪ್ರಸಾದ್ ಅಡುಗೆ ಭಟ್ಟನ ಕೆಲಸ ಮಾಡಿಕೊಂಡಿದ್ದು 2018ರಲ್ಲಿ ದಿವ್ಯಾರನ್ನು ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆ ಸಹ ಆಗಿದ್ದರು. ಮೂರು ವರ್ಷಗಳ ಕಾಲ ಸುಂದರ ಸಂಸಾರ ಸಹ ನಡೆಸಿದ್ದರು. ಆದರೆ, ಏಪ್ರಿಲ್ 25ರಂದು ಸತಿ-ಪತಿಯ ನಡುವೆ ಜಗಳ ನಡೆದಿದೆ. ಇದಾದ ಬಳಿಕ ಅದೇ ತಿಂಗಳು 30ರಂದು ಬೆಳಗ್ಗೆ 11 ಗಂಟೆಗೆ ಯಾರಿಗೂ ಹೇಳದೆ ದಿವ್ಯಾ ಮನೆಬಿಟ್ಟು ಹೋಗಿದ್ದಾಳೆ.
ಇತ್ತ ಪತಿ ಪ್ರಸಾದ್ ಪತ್ನಿಯನ್ನು ಸಾಕಷ್ಟು ಹುಡುಕಾಡಿ ಕೊನೆಗೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ದಿವ್ಯಾಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ, ಇದುವರೆಗೂ ಆಕೆಯ ಸುಳಿವು ಸಿಕ್ಕಿಲ್ಲ. ಆಕೆಯ ಬಳಿಯಿದ್ದ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹೇಗಾದರೂ ಮಾಡಿ ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪ್ರಸಾದ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.