ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಓಎಲ್​ಎಕ್ಸ್​ನಲ್ಲಿ 1 ರೂ. ನಾಣ್ಯ ಮಾರಾಟಕ್ಕಿಟ್ಟ ಶಿಕ್ಷಕಿ ಕಳೆದುಕೊಂಡಳು ಲಕ್ಷ, ಲಕ್ಷ..!!

 ಬೆಂಗಳೂರು: ಓಎಲ್​ಎಕ್ಸ್​ನಲ್ಲಿ 1947ರ ಇಸವಿ 1 ರೂ. ನಾಣ್ಯ ಮಾರಾಟಕ್ಕಿಟ್ಟ ಶಿಕ್ಷಕಿಗೆ ಸೈಬರ್​ ವಂಚಕರು 1 ಕೋಟಿ ರೂ.ಗೆ ಖರೀದಿ ಮಾಡುವ ನೆಪದಲ್ಲಿ 1 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.

 ಶಿಕ್ಷಕಿಯು ಜೂನ್​ 15ರಂದು ಓಎಲ್​ಎಕ್ಸ್​ನಲ್ಲಿ 1947ನೇ ಇಸವಿಯ 1 ರೂ. ನಾಣ್ಯವೊಂದು ಮಾರಾಟಕ್ಕೆ ಇರುವುದಾಗಿ ಜಾಹೀರಾತು ಹಾಕಿದ್ದರು. ತನ್ನ ಮೊಬೈಲ್​ ನಂಬರ್​ ಅಪ್​ಲೋಡ್​ ಮಾಡಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ, 1 ರೂ. ನಾಣ್ಯವನ್ನು 1 ಕೋಟಿ ರೂ.ಗೆ ಖರೀದಿ ಮಾಡುವುದಾಗಿ ನಂಬಿಸಿದ್ದ. ಆನಂತರ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ಸ್ಕ್ರೀನ್​ ಶಾಟ್​ ತೆಗೆದು ಶಿಕ್ಷಕಿಗೆ ವಾಟ್ಸ್​ಆ್ಯಪ್​ ಮಾಡಿದ್ದ. ಇದನ್ನು ನಂಬಿದ್ದ ಶಿಕ್ಷಕಿಗೆ ಎಷ್ಟು ಹೊತ್ತಾದರು ಹಣ ಖಾತೆಗೆ ಬಂದಿಲ್ಲ. ಆಗ ಶಿಕ್ಷಕಿ, ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ವಂಚಕ, ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಶುಲ್ಕ ಪಾವತಿ ಮಾಡಬೇಕೆಂದು ನಂಬಿಸಿ ಹಣವನ್ನು ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ, ಶಿಕ್ಷಕಿ ಬ್ಯಾಂಕ್​ ಖಾತೆಗೆ ಯಾವುದೇ ಹಣ ವರ್ಗಾವಣೆ ಆಗಿಲ್ಲ. ವಂಚಕ ಮತ್ತೆ ಹಣ ಕೇಳಿದಾಗ ಅನುಮಾನ ಬಂದ ಶಿಕ್ಷಕಿ, ಹಣ ಪಡೆದ ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW