-->

ಅನೈತಿಕ ಸಂಬಂಧ: ವಿಷ ಕುಡಿದ ಇಬ್ಬರಲ್ಲಿ ಮಹಿಳೆ ಸಾವು

ಅನೈತಿಕ ಸಂಬಂಧ: ವಿಷ ಕುಡಿದ ಇಬ್ಬರಲ್ಲಿ ಮಹಿಳೆ ಸಾವು

ಮುದ್ದೇಬಿಹಾಳ: ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ವಿಷ ಸೇವನೆ ಮಾಡಿ, ಮಹಿಳೆ ಮಾತ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪುರುಷನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಬಿದರಕುಂದಿ ಗ್ರಾಮ ವ್ಯಾಪ್ತಿಯ ಹೊಲವೊಂದರಲ್ಲಿ ಮಂಗಳವಾರ ನಡೆದಿದೆ.

ಮೃತಳನ್ನು ಎರಡು ಮಕ್ಕಳ ತಾಯಿ ಮುದ್ದೇಬಿಹಾಳ ತಾಲೂಕು ಗಂಗೂರ ಗ್ರಾಮದ ರೇಣುಕಾ ಅಶೋಕ್​ ಝಳಕಿ (40) ಎಂದು ಗುರುತಿಸಲಾಗಿದೆ. ಆರು ಮಕ್ಕಳ ತಂದೆ ಆಗಿರುವ ತಾಲೂಕಿನ ಹಡಲಗೇರಿ ಗ್ರಾಮದ ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿ (46) ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 ಕಾಳಗಿ ಗ್ರಾಮದವಳಾದ ರೇಣುಕಾ ಹಾಗೂ ಹಡಲಗೇರಿ ಗ್ರಾಮದ ಬಸವರಾಜ ಮಧ್ಯೆ ಮೊದಲಿನಿಂದಲೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ರೇಣುಕಾಳ ಪತಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದು, ರೇಣುಕಾ ಆಕೆಯ ಮಕ್ಕಳೊಂದಿಗೆ ಗಂಗೂರ ಗ್ರಾಮದಲ್ಲಿ ವಾಸವಾಗಿದ್ದಳು.

ಘಟನಾ ಸ್ಥಳದಲ್ಲಿ ವಿಷದ ಬಾಟಲು ಸಿಕ್ಕಿರುವುದು, ಮೃತಳ ಬಾಯಲ್ಲಿ ನೊರೆಯ ಜೊತೆ ರಕ್ತ ಬಂದಿರುವುದು ಇವರು ವಿಷ ಸೇವಿಸಿದ್ದನ್ನು ಖಚಿತಪಡಿಸಿದೆ. ಆಕೆಯ ಮುಖದ ಮೇಲೆ ಗಾಯದ ಗುರುತು ಇದ್ದು ಆಕೆಗೆ ಬಲವಂತವಾಗಿ ವಿಷ ಸೇವನೆ ಮಾಡಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಮೃತಳ ಸಹೋದರ ಕಾಳಗಿ ಗ್ರಾಮದ ಲಕ್ಕಪ್ಪ ನಿಗರಿ ಸಹೋದರಿ ರೇಣುಕಾ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99