'ಬ್ರದರ್ ನನ್ನ ಹುಡುಗಿಗೆ iphone ಕೊಡಿಸಿ' ಎಂದ ಯುವಕ- ನಟ ಸೋನು ಸೂದ್ ಪ್ರತಿಕ್ರಿಯೆ ನೋಡಿ
Wednesday, June 23, 2021
ಹೈದರಾಬಾದ್: ಬಾಲಿವುಡ್ ನಟ ಸೋನು ಸೂದ್ ಅವರಿಗೆ ಯುವಕನೊಬ್ಬ ವಿಚಿತ್ರ ಬೇಡಿಕೆ ಇಟ್ಟಿದ್ದು, ಅದಕ್ಕೆ ನಟ ಕೂಟ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ನೆಟ್ಟಿಗನೊಬ್ಬ ಬ್ರದರ್, ನನ್ನ ಗರ್ಲ್ಫ್ರೆಂಡ್ ಐಫೋನ್ ಕೇಳುತ್ತಿದ್ದಾಳೆ. ಅದಕ್ಕಾಗಿ ನಿಮ್ಮಿಂದ ಏನಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರ ನೀಡಿರುವ ನಟ ಸೋನು ಸೂದ್, ನಿಮ್ಮ ಗೆಳತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಒಂದು ವೇಳೆ ಐಫೋನ್ ನೀಡಿದ್ರೆ ಅದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.
ಸೋನು ಸೂದ್ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಐಫೋನ್ ಕೇಳಿರುವ ವ್ಯಕ್ತಿಯನ್ನು ತರಾಟೆಗೆ ಸಹ ತೆಗೆದುಕೊಂಡಿದ್ದಾರೆ.