Mangalore ವರದಕ್ಷಿಣೆ ಕಿರುಕುಳ: ಠಾಣೆ ಮೆಟ್ಟಿಲೇರಿದ ಯುವತಿ
Saturday, June 19, 2021
ಮಂಗಳೂರು: ತನ್ನ ಮನೆಯವರೊಂದಿಗೆ ಸೇರಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ ಇದೀಗ ತನ್ನನ್ನು ಹಾಗೂ ಮಗುವನ್ನು ನಿರ್ಲಕ್ಷಿಸಿ ಹೋಗಿರುವುದಾಗಿ ಯುವತಿಯೋರ್ವರು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಸೂರಜ್ ಜತೆ ತನ್ನ ವಿವಾಹವಾದಾಗ 18 ಪವನು ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದು, ಮದುವೆಯ ಸಂಪೂರ್ಣ ಖರ್ಚು 8 ಲಕ್ಷ ರೂ. ತಮ್ಮ ಹೆತ್ತವಯ ಭರಿಸಿದ್ದರು. ಮದುವೆಯಾದ ಬಳಿಕ ಆರೋಪಿ ಸೂರಜ್ ಮತ್ತು ಆತನ, ತಮ್ಮ, ತಂಗಿ, ತಮ್ಮನ ಪತ್ನಿಯು ವರದಕ್ಷಿಣೆ ರೂಪದಲ್ಲಿ ಮದುವೆ ಸಮಯ ನೀಡಿದ ಬಂಗಾರ ಕಡಿಮೆಯಾಯಿತು ಮತ್ತು ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ಒಂದು ಸೈಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿದ್ದಕ್ಕೆ ಆರೋಪಿ ಸೂರಜ್ ಮತ್ತು ಆತನ ಮನೆಯವರು ತಮಗೆ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಆರೋಪಿ ಸೂರಜ್ ಗೆ ಅಕ್ರಮ ಸಂಬಂಧವಿದ್ದು, ಈ ಬಗ್ಗೆ ತಾನು ಪ್ರಶ್ನಿಸಿರುವುದಕ್ಕೆ ಆತ ಮತ್ತು ಆತನ ಕಡೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ 2021 ಏಪ್ರಿಲ್ ನಲ್ಲಿ ತನ್ನನ್ನು ಮತ್ತು ಮಗುವನ್ನು ನಿರ್ಲಕ್ಷಿಸಿ ಬಿಟ್ಟು ಹೋಗಿರುವುದಾಗಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.