
MANGALORE SHOCKING- ಇಲಿಪಾಷಾಣ ತಿಂದು ಎರಡೂವರೆ ವರ್ಷದ ಮಗು ಸಾವು
ಮಂಗಳೂರು; ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಇಲಿ ಪಾಷಾಣ ತಿಂದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ.
ನಿವೃತ್ತ ಸೈನಿಕ ಕೆಮ್ಮಾರದ ಸೈಜು ಎಂಬವರ ಪುತ್ರಿಯ ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು.
ಜೂ.19 (ಶನಿವಾರ) ರಂದು ಬೆಳಿಗ್ಗೆ ಮನೆಯಲ್ಲಿ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದ ವೇಳೆ ಎರಡು-ಮೂರು ತಿಂಗಳುಗಳ ಹಿಂದೆ ತಂದಿಟ್ಟಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಸಿಕ್ಕಿದ್ದು ಅದನ್ನು ಅಲ್ಲಿಯೆ ಇಟ್ಟಿದ್ದರು. ಮನೆಯವರು ಕೆಲಸ ಮಾಡುತ್ತಿದ್ದಾಗ ಈ ಮಗು ಆಟವಾಡುತ್ತಿತ್ತು. ಇದೇ ವೇಳೆ ಅಲ್ಲಿಯೆ ಇದ್ದ ಇಲಿ ಪಾಷಾಣವನ್ನು ತಿಂದಿದೆ.
ಮಗುವಿಗೆ ಮಧ್ಯಾಹ್ನದ ವೇಳೆಗಾಗಲೇ ವಾಂತಿ ಆರಂಭಗೊಂಡಿದ್ದು ಕೂಡಲೇ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಮಗು ತೀವ್ರವಾಗಿ ಅಸ್ವಸ್ಥಗೊಂಡಾ ಇಂದು (ಜೂ.20)ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಪಾಸಣೆ ನಡೆಸಿದ ವೇಳೆ ಮಗು ಸಾವನ್ನಪ್ಪಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.