-->

Mangalore- ರಾತ್ರಿ NMPT ಯಲ್ಲಿ‌ ನಡೆಯಿತು ದುರಂತ- ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಲಾರಿ (video)

Mangalore- ರಾತ್ರಿ NMPT ಯಲ್ಲಿ‌ ನಡೆಯಿತು ದುರಂತ- ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಲಾರಿ (video)

ಮಂಗಳೂರು: ಮಂಗಳೂರಿನ ಎನ್ ಎಂ ಪಿ ಟಿ ಯಲ್ಲಿ ಆದಿತ್ಯವಾರ ರಾತ್ರಿ 10.30 ಕ್ಕೆ ಲಾರಿಯೊಂದು ಧಕ್ಕೆಯ ನೀರಿಗೆ ಬಿದ್ದು ಮುಳುಗಿದ ಘಟನೆ ನಡೆದಿದೆ.ಲಾರಿಯಲ್ಲಿದ್ದ ಓರ್ವ ಸಾವನ್ನಪ್ಪಿದ್ದು  ,  ಇನ್ನೋರ್ವ ನ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ರಾಜೇಶಾಬ್ (26) ಮೃತವ್ಯಕ್ತಿಯಾಗಿದ್ದು, ಭೀಮಪ್ಪ (22) ಕಣ್ಮರೆಯಾಗಿದ್ದಾರೆ.

ರಾತ್ರಿ10.30 ಕ್ಕೆ ಡೆಲ್ಟಾ ಕಂಪೆನಿಗೆ ಸೇರಿದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದೆ.  ಆ ಸಂದರ್ಭದಲ್ಲಿ ಟ್ರಕ್ ನಲ್ಲಿ ಇಬ್ಬರಿದ್ದರು. ಟ್ರಕ್ ನೀರಿಗೆ ಬೀಳುತ್ತಿರುವುದನ್ನು ಗಮನಿಸಿದ ಟಗ್ ಬೋಟ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಕೂಡಲೇ ಸಿಐಎಸ್ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ರಾಜೇಶಾಬ್ ನನ್ನು ಮೇಲಕ್ಕೆತ್ತಲಾಗಿದ್ದು ಆತ ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ. ಭೀಮಪ್ಪನ ಶೋಧ ಕಾರ್ಯ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99