ವಿವಾಹಿತನೊಂದಿಗೆ ಪರಾರಿಯಾದ ಯುವತಿ: ಏನಿವರ ಲವ್ ಕಹಾನಿ..??
Monday, June 21, 2021
ಗಂಗೊಳ್ಳಿ: ವಿವಾಹಿತನನ್ನು ಯುವತಿಯೋರ್ವಳು ಒಂದು ವರ್ಷದಿಂದ ಪ್ರೀತಿಸುತ್ತಿದ್ದು. ಅವರಿಬ್ಬರೂ ಮನೆಬಿಟ್ಟು ಓಡಿ ಹೋದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ತಾಲೂಕು ಆಲೂರು ಗ್ರಾಮದ ಹೆಬ್ಬಾಗಿಲು ಮನೆ ಹತ್ತಿರ ವಾಸಿಸುತ್ತಿದ್ದ ಬಾಬಿ ಎಂಬುವರ ಪತಿ ಚಂದ್ರ (42) ಹಾಗೂ ಇವರ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದ ವನಜಾ (29) ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು.
ಜೂನ್ 7ರಂದು ಚಂದ್ರ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅದೇ ದಿನ ಮಧ್ಯಾಹ್ನ ವನಜಾ ಸಹ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಇಬ್ಬರೂ ಈವರೆಗೆ ವಾಪಸು ಮನೆಗೆ ಬಂದಿಲ್ಲ. ಚಂದ್ರ ಹಾಗೂ ವನಜಾ ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಹೋಗಿರಬಹುದು ಎಂದು ಬಾಬಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.