
ಭಾರತ ಟೆಸ್ಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ - ಪೂನಂ ಪಾಂಡೆ
ನವದೆಹಲಿ: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವಿಶ್ವಕಪ್ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆಡುತ್ತಿರುವ ವೇಳೆ ಭಾರತ ಗೆದ್ದರೆ ಬೆತ್ತಲಾಗುವುದಾಗಿ ಪೂನಂ ಪಾಂಡೆ ಘೋಷಿಸಿದ್ದಾರೆ.
ಭಾರತ ತಂಡ ಪ್ರಶಸ್ತಿ ಗೆದ್ದರೆ ಬೆತ್ತಲಾಗುವುದಾಗಿ 2011ರಲ್ಲಿ ಏಕದಿನ ವಿಶ್ವಕಪ್ ವೇಳೆ ಎಂಎಸ್ ಧೋನಿ ಬಳಗಕ್ಕೆ ಆಫರ್ ನೀಡಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ನಟಿ ಪೂನಂ ಪಾಂಡೆ, ಇದೀಗ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವಿಶ್ವಕಪ್ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆಡುತ್ತಿರುವ ವೇಳೆ ವಿರಾಟ್ ಕೊಹ್ಲಿ ಬಳಗಕ್ಕೂ ಅಂಥದ್ದೇ ಆಫರ್ ಪ್ರಕಟಿಸಿದ್ದಾರೆ.
ಇತ್ತೀಚೆಗೆ ವೈಯಕ್ತಿಕ ವಿಚಾರಗಳಿಂದಾಗಿ ಸಾಕಷ್ಟು ವಿವಾದಗಳಿಗೆ ಗ್ರಾಸವಾಗಿದ್ದ ಪೂನಂ ಪಾಂಡೆ ಕ್ರಿಕೆಟ್ ಸಮಯದಲ್ಲಿ ಮತ್ತೊಮ್ಮೆ ವಿವಾದ ಎದುರಿಸಲು ಸಿದ್ಧ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರು.