Mangalore- ದ.ಕ ಜಿಲ್ಲೆಯಲ್ಲಿ ನಾಳೆ (june 23) ಯಿಂದ ಎಲ್ಲಾ ಅಂಗಡಿ ಓಪನ್- ಸಚಿವ ಕೋಟ; ಸಮಯ ಮಿತಿ ಎಷ್ಟು? (Video)
Tuesday, June 22, 2021
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅನುಮತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ಸಮಸ್ಯೆಯಾಗುತ್ತಿದೆ ಎಂದು ಅಂಗಡಿ ಮಾಲಕರುಗಳು ವಿನಂತಿಸಿದ ಮೇರೆಗೆ ಮುಖ್ಯಮಂತ್ರಿ ಗಳ ಜೊತೆಗೆ ಈ ವಿಚಾರದಲ್ಲಿ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಗಳು ಮಧ್ಯಾಹ್ನ 2 ಗಂಟೆವರೆಗೆ ಅಂಗಡಿ ತೆರೆಯಲು ಅನುಮತಿ ನೀಡಲು ರಾಜ್ಯ ಮುಖ್ಯ ಕಾರ್ಯದರ್ಶಿ ಗಳಿಗೆ ಆದೇಶಿಸಿದ್ದಾರೆ ಎಂದರು.
ಆದರೂ ಸಾರ್ವಜನಿಕ ರು ಗುಂಪುಗೂಡದೆ, ಸಾಮಾಜಿಕ ಅಂತರ ಕಾಪಾಡಿಕೊಂಡು, ಲಸಿಕೆ ಹಾಕಿ ಮುಂಜಾಗರುಕತೆ ತೆಗೆದುಕೊಳ್ಳಬೇಕು ಎಂದರು.