ಎರಡು ವರ್ಷದ ಮಗು ಕೋವಿಡ್ ಗೆ ಬಲಿ....
Tuesday, June 22, 2021
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಎರಡುವರೆ ವರ್ಷ ಪ್ರಾಯದ ಗಂಡು ಮಗು ಕೋರೊನದಿಂದ ಮೃತಪಟ್ಟಿದೆ.
ಈ ಮಗುವನ್ನು ಜೂನ್ 17ರಂದು ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಂದರ್ಭ ರಿಪೋರ್ಟ್ ಕೋವಿಡ್ ಪಾಸಿಟಿವ್ ಎಂದು ಬಂದಿದ್ದು ಚಿಕಿತ್ಸೆ ಫಲಿಸದೆ ಮಗುಸಾವನ್ನಪ್ಪಿದೆ ಎಂದು ಡಿಎಚ್ ಒ ಡಾ. ನಾಗಭೂಷಣ್ ಅವರು ತಿಳಿಸಿದ್ದಾರೆ.