ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಅಜ್ಜನಾಗುತ್ತಿದ್ದಾರೆ ಕುಮಾರಸ್ವಾಮಿ, ನಿಖಿಲ್ ಪತ್ನಿಗೆ 5 ತಿಂಗಳು!


ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಾವು ತಾತನ ಆಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.
ನಟ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಐದು ತಿಂಗಳು ಎಂಬುದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಮಾಹಿತಿಯನ್ನು ಸ್ವತಹ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ ಹಂಚಿಕೊಂಡಿದ್ದು, ತಮ್ಮ ಪುತ್ರನ ಪತ್ನಿ, ಸೊಸೆ ರೇವತಿಯವರಿಗೆ ಐದು ತಿಂಗಳು ತುಂಬಿರೋದಾಗಿ ತಿಳಿಸುವ ಮೂಲಕ, ತಾತನಾಗುತ್ತಿರುವ ವಿಷಯವನ್ನು ಖಚಿತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರು, ರೇವತಿಯೊಂದಿಗೆ ಏಪ್ರಿಲ್ 17, 2020ರಂದು  ವಿವಾಹ ಆಗುವ ಮೂಲಕ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW