
Mangalore- ರಿಕ್ಷಾ ಸೀಟ್ ಕದ್ದ ಅಟೋ ಡ್ರೈವರ್- ಸಿಸಿಟಿವಿ ದೃಶ್ಯ ವೈರಲ್ (Video)
Saturday, June 12, 2021
ಮಂಗಳೂರು: ಮಂಗಳೂರಿನ ಅಟೋ ರಿಕ್ಷಾವೊಂದರ ಸೀಟನ್ನೆ ರಿಕ್ಷಾ ಚಾಲಕನೊಬ್ಬ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ನಿಂತಿದ್ದ ರಿಕ್ಷಾ ವೊಂದರ ಬಳಿ ಬಂದ ರಿಕ್ಷಾ ದಿಂದ ಇಳಿದ ಚಾಲಕನೊಬ್ಬ ನಿಂತಿದ್ದ ರಿಕ್ಷಾದ ಸೀಟನ್ನು ಕದ್ದು ಕೊಂಡೊಯ್ದಿದ್ದಾನೆ. ಇದರ ಸಿಸಿಟಿವಿ ಆಧಾರದಲ್ಲಿ ಕಳವುಗೈದ ರಿಕ್ಷಾ ಚಾಲಕನನ್ನು ಪತ್ತೆ ಹಚ್ಚಿದ ಸೀಟು ಕಳವಾದ ರಿಕ್ಷಾ ಚಾಲಕ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಳವುಗೈದ ರಿಕ್ಷಾ ಚಾಲಕ ಕ್ಷಮೆಯಾಚಿಸಿದ್ದಾನೆ. ಈ ಎರಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.