ಟಾಪ್ ಲೆಸ್ ಪೊಟೋ ಹಾಕಿ ವಿವಾದಕ್ಕೆ ಕಾರಣವಾದ ಪೋರ್ನ್ ಸ್ಟಾರ್ ನಟಿಯ ಸಾವಿನ ರಹಸ್ಯ ಏನು?
Saturday, June 12, 2021
:ಇತ್ತೀಚೆಗೆ ಟಾಪ್ಲೆಸ್ ಫೋಟೋ ಹಾಕಿ ವಿವಾದಕ್ಕೆ ಕಾರಣವಾಗಿದ್ದ ಪೋರ್ನ್ ಸ್ಟಾರ್ ಆಕೆಯ ಮನೆಯಲ್ಲೇ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದಿದೆ.
ಅಮೆರಿಕದ ಡಕೋಟಾ ಸ್ಕೈ(27) ಮೃತ ನಟಿ. ಈಕೆ ವಿಚಾರವನ್ನು ಆಕೆಯ ಪತಿಯೇ ಪೊಲೀಸರಿಗೆ ತಿಳಿಸಿದ್ದಾನೆ. ಹೊರಗೆ ಹೋಗಿದ್ದ ತಾನು ಮನೆಗೆ ಬರುವಷ್ಟರಲ್ಲಿ ಹೆಂಡತಿ ಶವವಾಗಿದ್ದಾಗಿ ಆತ ತಿಳಿಸಿರುವುದಾಗಿ ಹೇಳಲಾಗಿದೆ.
ಪೊಲೀಸರಿಂದಾಗಿ ಹತ್ಯೆಯಾಗಿದ್ದ ಜಾರ್ಜ್ ಫ್ಲೋಯ್ಡ್ನ ವಾಲ್ ಪೇಂಟಿಂಗ್ ಇರುವ ಜಾಗದಲ್ಲಿ ನಿಂತು ಟಾಪ್ ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದಳು. ಆದರೆ ಅದಕ್ಕೆ ಅನೇಕರು ಆಕ್ರೋಶ ಹೊರಹಾಕಿದ್ದರು. ಜಾರ್ಜ್ ಪರ ಮತ್ತು ವಿರೋಧ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದವು. ಆದರೆ ತನ್ನ ನಿಲುವು ಬಿಡದ ನಟಿ, ಯಾರೇ ಆದರೂ ಪೊಲೀಸರಿಂದ ಹತ್ಯೆ ಆದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದರು.
ಡಕೋಟಾ ಸ್ಕೈ ಆತ್ಮಹತ್ಯೆ ಮಾಡಿಕೊಂಡಳೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೋ ಎನ್ನುವ ವಿಚಾರ ತನಿಖೆಯಿಂದ ತಿಳಿದುಬರಬೇಕಿದೆ.