ಮದುವೆಯಾದ ಎರಡೇ ದಿನಕ್ಕೆ ಪತಿಗೆ ಬಿಗ್ ಶಾಕ್: ಆಕೆ ಮಾಡಿದ್ದೇನು?
Saturday, June 12, 2021
ಬೆಂಗಳೂರು: ಪ್ರಿಯಕರನಿಲ್ಲದ ಜೀವನವನ್ನು ಊಹಿಸಿಕೊಳ್ಳಲು ಆಗದ ಯುವತಿ ಮದುವೆಯಾದ ಎರಡೇ ದಿನದಲ್ಲಿ ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ರೈಲ್ವೆ ನಿಲ್ದಾಣದಲ್ಲೇ ಮದುವೆಯಾಗಿ ಬಳಿಕ ಬೆಂಗಳೂರಿಗೆ ಹೊರಡುವ ರೈಲು ಹತ್ತಿ ಬಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಅನುಕುಮಾರಿ ಮತ್ತು ಆಶು ಕುಮಾರ್ ಇಬ್ಬರು ಬಿಹಾರದ ಮೂಲದವರು. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅನುಕುಮಾರಿಯ ಪಾಲಕರಿಗೆ ಮಗಳ ಪ್ರೀತಿ ಇಷ್ಟವಿರಲಿಲ್ಲ. ಹೀಗಾಗಿ ಪಾಲಕರು ಬಲವಂತದಿಂದ ಬೇರೊಬ್ಬನ ಜತೆ ಯುವತಿಗೆ ಮದುವೆ ಮಾಡಿದ್ದರು.
ಆದರೆ, ಆಕೆಗೆ ಬೇರೊಬ್ಬನನ್ನು ಗಂಡನಾಗಿ ಸ್ವೀಕರಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಮದುವೆಯಾದ ಎರಡೇ ದಿನದಲ್ಲಿ ಮನೆಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ರಾತ್ರಿ ಮಲಗಿದ್ದ ವೇಳೆ ಗಂಡನನ್ನು ಕಟ್ಟಿಹಾಕಿ ಮನೆಯಿಂದ ಓಡಿಬಂದಿದ್ದಾಳೆ. ತದನಂತರದಲ್ಲಿ ಆಶುಕುಮಾರನೊಂದಿಗೆ ಸುಲ್ತಾನ್ಗಂಜ್ ರೈಲ್ವೆ ನಿಲ್ದಾಣದಲ್ಲಿ ಮದುವೆ ಆಗಿದ್ದಾಳೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿವೆ.