
Mangalore- ಸುಳ್ಯದಲ್ಲಿ ಡೆಂಗ್ಯುವಿಗೆ ಎರಡನೇ ಬಲಿ-27 ವರ್ಷದ ಯುವಕ ಸಾವು!
Tuesday, June 15, 2021
ಮಂಗಳೂರು:ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಜ್ವರಕ್ಕೆ ಎರಡನೇ ಬಲಿಯಾಗಿದೆ. ಎರಡು ದಿನಗಳ ಅಂತರದಲ್ಲಿ ಎರಡು ಬಲಿಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.
ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದ ಕನ್ನಡಕಜೆ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾದ ಯುವಕ.ಇವರು ಚಿನ್ನಪ್ಪ ಎಂಬವರ ಏಕೈಕ ಪುತ್ರರಾಗಿದ್ದಾರೆ.
ಶಶಿಕುಮಾರ್ ಅವರಿಗೆ ಕೆಲವು ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಡೆಂಗ್ಯು ಜ್ವರ ಉಲ್ಬಣಿಸಿ,ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು.