ನೂರ್ ಫಾತಿಮಾ ಎಂಬ 6 ತಿಂಗಳ ಮಗು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಂಎ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿತ್ತು. 'ಝೊಲ್ಗೆನ್ಸ್ಮಾ' ಎಂಬ ಅತ್ಯಂತ ದುಬಾರಿ ಚುಚ್ಚುಮದ್ದಿನ ಅವಶ್ಯಕತೆ ಇದ್ದು, ಇದರ ಬೆಲೆ ಬರೋಬ್ಬರಿ 16 ಕೋಟಿ ರೂಪಾಯಿ ಆಗಿತ್ತು.
ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದಾಗ ಮಾಧ್ಯಮದ ಮುಂದೆ ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ ಅಳಲು ತೋಡಿಕೊಂಡಿದ್ದ ಮಗುವಿನ ತಂದೆ ಝೀಶಮ್ ಅಹ್ಮದ್, ತಕ್ಷಣವೇ ಇಂಜೆಕ್ಷನ್ ವ್ಯವಸ್ಥೆಯಾಗಿಲ್ಲವೆಂದರೆ ನನ್ನ ಮಗಳು ಬದುಕುಳಿಯುವುದಿಲ್ಲ, ಅವಳ ಜೀವ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದರು
ಅನೇಕ ಸಂಘ-ಸಂಸ್ಥೆಗಳು ಧನ ಸಹಾಯ ಮಾಡಿದ್ದರೂ ಸರಿಯಾದ ಸಮಯಕ್ಕೆ 16 ಕೋಟಿ ರೂ. ಹೊಂದಿಕೆಯಾಗಲಿಲ್ಲ. ಹೀಗಾಗಿ ನೂರ್ ಫಾತಿಮಾ ಇಂದು ತನ್ನ ಉಸಿರು ನಿಲ್ಲಿಸಿದ್ದಾಳೆ.