ಅಮೆರಿಕದಲ್ಲಿ ಇನ್ಮುಂದೆ ನಾಯಿಗಳಿಗೆ ಎಂಟ್ರಿ ಇಲ್ಲ! ಕಾರಣವೇನು ಗೊತ್ತಾ?
Tuesday, June 15, 2021
ನ್ಯೂಯಾರ್ಕ್: ಅಮೆರಿಕಕ್ಕೆ ನಾಯಿಮರಿಗಳನ್ನು ತರುವ ಪ್ರಕ್ರಿಯೆ ಹೆಚ್ಚಾಗಿದ್ದ ಕಾರಣ ಇನ್ಮುಂದೆ ಅಮೆರಿಕವು 113 ರಾಷ್ಟ್ರಗಳಿಂದ ನಾಯಿಗಳನ್ನು ಕರೆಸಿಕೊಳ್ಳುವಂತೆ ಇಲ್ಲ ಎಂದು ಆದೇಶ ಹೊರಡಿಸಿದೆ.
ರೇಬೀಸ್ ರೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ತಳಿಗಳ ನಾಯಿಗಳನ್ನು ನಿಷೇಧಿಸಲಾಗಿದೆ. ಈ ನಿಬಂಧನೆ ಜುಲೈ 14 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಹೇಳಿದೆ.
ಒಂದು ವೇಳೆ , ನಾಯಿಗಳನ್ನು ಆಮದು ಮಾಡಿಕೊಳ್ಳುವುದಿದ್ದರೆ ಅವುಗಳಿಗೆ ಈಗಾಗಲೇ ರೇಬೀಸ್ ಲಸಿಕೆ ಹಾಕಿಸಿರುವ ಕುರಿತು ಪುರಾವೆ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಅಮೆರಿಕದ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡೌಗ್ಲಾಸ್ ಕ್ರಾಟ್ ‘ಅಮೆರಿಕಕ್ಕೆ ಆರೋಗ್ಯವಂತಹ ನಾಯಿಗಳನ್ನು ತರಬೇಕು, ಅದರಲ್ಲೂ ವಿಶೇಷವಾಗಿ ನಾಯಿಮರಿಗಳನ್ನು ತರುವಾಗ ಅವುಗಳ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಬೇಕು’ ಎಂದು ಅವರು ತಿಳಿಸಿದ್ದಾರೆ.