-->

ಕೋವಿಡ್ ಆಸ್ಪತ್ರೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಜೋಡಿ

ಕೋವಿಡ್ ಆಸ್ಪತ್ರೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಜೋಡಿ

ಹುಬ್ಬಳ್ಳಿ: ಕೊರೊನಾ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ‌. ಸೋಂಕಿತರು ಸರಿಯಾಗಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್ ಬೆಡ್​​, ಔಷಧಿ, ರೆಮಿಡಿಸಿವರ್​ ಇಂಜಕ್ಷನ್​ ಸಿಗದೆ ಸಾಯುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲೂ ಇಲ್ಲೊಂದು ಜೋಡಿ ಅಮಾನವೀಯವಾಗಿ ವರ್ತಿಸಿ ಜೈಲು ಸೇರಿದೆ.

ಹುಬ್ಬಳ್ಳಿಯ ವೆಂಕಟೇಶ್ವರ ಕಾಲನಿಯ ಸಿದ್ದನಗೌಡ ಪಾಟೀಲ್ ಮತ್ತು ವಿನಾಯಕನಗರದ ರಿಯಾ ಬಂಧಿತ ಜೋಡಿ.

ಸುಚಿರಾಯು ಎಂಬ ಖಾಸಗಿ ಆಸ್ಪತ್ರೆಯಲ್ಲಿ ಕ್ಲೀನರ್​ ಆಗಿ ಸಿದ್ದನಗೌಡ ಕೆಲಸ ಮಾಡುತ್ತಿದ್ದರೆ ರಿಯಾ ಹುಬ್ಬಳ್ಳಿಯ ತತ್ವದರ್ಶಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಪ್ರೇಮಿಗಳಾದ ಈ ಇಬ್ಬರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಬೇಕಿದ್ದ ರೆಮಿಡಿಸಿವರ್ ಇಂಜೆಕ್ಷನ್​ಗಳನ್ನು ಕದ್ದು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಲು ಹೋಗಿದ್ದಾರೆ. ಆದರೆ ಒಂದು ದಿನ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99