ಎರಡನೆಯ ಹೆರಿಗೆಯ ಬಳಿಕ ಮತ್ತೆ ವರ್ಕ್ಔಟ್ ನತ್ತ ಮುಖಮಾಡಿರುವ ಕರೀನಾ: ಹಾಟ್ ಫೋಟೋ ಹರಿಯಬಿಟ್ಟ ನಟಿ
Thursday, June 3, 2021
ಮುಂಬೈ: ಕೆಲ ತಿಂಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿರುವ ನಟಿ ಕರೀನಾ ಕಪೂರ್ ಇದೀಗ ಮತ್ತೊಮ್ಮೆ ವರ್ಕ್ಔಟ್ನತ್ತ ಮುಖ ಮಾಡಿದ್ದಾರೆ.
ಗರ್ಭಿಣಿಯಾಗಿದ್ದಾಗ ಹೆಚ್ಚಿಸಿಕೊಂಡಿರುವ ತೂಕವನ್ನು ಇದೀಗ ಇಳಿಸಿಕೊಳ್ಳಲಾರಂಭಿಸಿದ್ದಾರೆ. ಅವರು ಸ್ಲಿಮ್ ಆಗಿರುವ ಹಾಟ್ ಫೋಟೋವೊಂದನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಮಗುವಿನ ಲಾಲನೆ ಪಾಲನೆಯಲ್ಲೇ ಕಾಲ ಕಳೆದಿರುವ ಕರೀನಾ ಇದೀಗ ತಮ್ಮ ವೃತ್ತಿ ಬದುಕಿನತ್ತಲೂ ಗಮನ ಹರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ವರ್ಕ್ಔಟ್, ಯೋಗ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಕಿಟಕಿಯ ಗಾಜಿನ ಮುಂದೆ ನಿಂತು ತಮ್ಮ ದೇಹ ಕಾಣಿಸುವಂತೆ ಫೋಟೋ ತೆಗೆದುಕೊಂಡು ಹಂಚಿಕೊಂಡಿರುವ ಕರೀನಾ, “ಗಾಜಿನಲ್ಲಿ ಕಾಣುತ್ತಿರುವ ವಸ್ತುಗಳು ಕಾಣುವುದಕ್ಕಿಂತ ಹೆಚ್ಚು ಹತ್ತಿರದಲ್ಲೇ ಇರುತ್ತವೆ. ಹಾಗಾಗಿ ಹೆಚ್ಚಿನ ಅಂತರ ಕಾಪಾಡಿಕೊಳ್ಳಿ, ಅದುವೇ ಈಗಿನ ನ್ಯೂ ನಾರ್ಮಲ್” ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸೆಟ್ಗೆ ಬರಲು ಸಿದ್ಧವಾಗಿರುವಂತೆ ಕಾಣುತ್ತಿದೆ, ಫಿಟ್ ಆಗಿದ್ದೀರ ಎನ್ನುವ ಪ್ರತಿಕ್ರಿಯೆಗಳು ಬರಲಾರಂಭಿಸಿವೆ.