
ಜೊತೆಗೆ ಮಲಗು ಎಂದು 30 ರ ಯುವತಿಗೆ ಬಾಸ್ ಪೀಡನೆ- ಆಕೆ ಕತ್ತರಿ ತಗೊಂಡು ಮಾಡಿದ್ದು....
Thursday, June 3, 2021
ಬಾರ್ಸಿಲೋನಾ: ತನ್ನ ಬಾಸ್ ಮರ್ಮಾಂಗವನ್ನೇ ಕತ್ತರಿಸಿದ ಯುವತಿಯೋರ್ವಳು ತಾನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿರುವ ಘಟನೆ ಸ್ಪೇನ್ನ ಬಾರ್ಸಿಲೋನಾ ನಗರದಲ್ಲಿ ನಡೆದಿದೆ. ಕೃತ್ಯದ ಕಾರಣ ಕೇಳಿದ ಪೊಲೀಸರು ಆಕೆಯ ಬಾಸ್ ಅನ್ನೂ ಬಂಧಿಸಿದ್ದಾರೆ.
ಆಕೆ ಸುಮಾರು 30 ವರ್ಷದ ಮಹಿಳೆ. ಬಾಂಗ್ಲಾದೇಶದ ಮೂಲದವಳಾಗಿರುವ ಆಕೆ ಬಾರ್ಸಿಲೋನಾದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಮೇಲ್ವಿಚಾರಣೆ ಮಾಡುತ್ತಿದ್ದ ಬಾಸ್ ಯಾವಾಗಲೂ ನನ್ನೊಂದಿಗೆ ಮಲಗು, ಮುತ್ತು ಕೊಡು ಎಂದು ಪೀಡಿಸುತ್ತಿರುತ್ತಿದ್ದನಂತೆ. ತಿಂಗಳುಗಳ ಕಾಲ ಅವನಿಂದ ತನ್ನನ್ನು ರಕ್ಷಿಸಿಕೊಂಡಿದ್ದ ಯುವತಿ ಇತ್ತೀಚೆಗೆ ಆತನ ವಿರುದ್ಧ ತಿರುಗಿ ಬಿದ್ದಿದ್ದಾಳೆ.
ಇತ್ತೀಚೆಗೆ ಆತ ಯುವತಿಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಆಗ ಸಿಟ್ಟಿಗೆದ್ದ ಆಕೆ ಅಲ್ಲಿದ್ದ ಚಾಕುವಿನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ನಂತರ ತಾನೇ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಕೆಯ ಬಾಸ್ ಅನ್ನೂ ಬಂಧಿಸಲಾಗಿದೆ. ಆತನೂ ಕೂಡ ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಮೂಲದವನು ಎನ್ನಲಾಗಿದೆ.