ಒಬ್ಬಳೊಂದಿಗೆ ಪ್ರೀತಿ-ಪ್ರೇಮ-ಪ್ರಣಯ.. ಇನ್ನೊಬ್ಬಳೊಂದಿಗೆ ಮದುವೆ...ಮುಂದೆ ಆಗಿದ್ದು ದುರಂತ..!!
Wednesday, June 30, 2021
ದಾವಣಗೆರೆ : ಗ್ರಾಪಂ ಸದಸ್ಯನಾಗಿರುವ ಹಾಲೇಶ್ ಎಂಬಾತ ಆತನ ದೂರ ಸಂಬಂಧಿ ಯಾಗಿರುವ ಯುವತಿಯನ್ನು ಪ್ರೀತಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಈಗ ಬೇರೆ ಮದುವೆಯಾಗಿ ಆಕೆಗೆ ಮೋಸ ಮಾಡಿದ್ದು, ಆಕೆ ಹಾಲೇಶ್ ನ ಮನೆ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ ವಿಷ ಸೇವಿಸಿದ್ದಾಳೆ.
ಹಾಲೇಶ್ ಹಾಗೂ ಚಿತ್ರದುರ್ಗ ಜಿಲ್ಲೆಯ ಓಬಳಾಪುರ ಗ್ರಾಮದ ಯುವತಿ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರಂತೆ.
ಹಾಲೇಶ್ ಯುವತಿಯ ಮನೆಗೆ ಆಗಾಗ್ಗೆ ಭೇಟಿ ನೀಡ್ತಿದ್ದ. ಹಾಲೇಶ್ ತನ್ನ ತಾಯಿಗೆ ಆರೋಗ್ಯ ಸರಿ ಇಲ್ಲದ ವೇಳೆ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿಯೇ ಇರಿಸಿಕೊಂಡಿದ್ದನಂತೆ. ಅಷ್ಟೇ ಅಲ್ಲದೆ ಆಕೆಯನ್ನು ಲೈಂಗಿಕವಾಗಿ ಕೂಡ ಬಳಸಿಕೊಂಡಿದ್ದಾನೆ. ಇದೀಗ ಆಕೆಗೆ ಕೈ ಕೊಟ್ಟು ಬೇರೆ ಯುವತಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ.
ಯುವತಿಯನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ಮಾಯಕೊಂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.