
ದೂರು ವಾಪಾಸು ಪಡೆದ ಆಸ್ಪತ್ರೆ- ಬಿಡುಗಡೆಗೊಂಡ ಸುಹೈಲ್ ಕಂದಕ್!
Friday, June 4, 2021
ಮಂಗಳೂರು; ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ಆರೋಪವೊರಿಸಿ ಬಂಧನಕ್ಕೆ ಕಾರಣವಾಗಿದ್ದ ಇಂಡಿಯನ್ ಆಸ್ಪತ್ರೆ ಮಂಡಳಿಯು ದೂರನ್ನು ವಾಪಾಸು ಪಡೆದ ಹಿನ್ನೆಲೆಯಲ್ಲಿ ಪೋಲಿಸ್ ಠಾಣೆಯಿಂದ ಬಿಡುಗಡೆಯಾಗಿದ್ದಾರೆ.
ಸುಹೈಲ್ ಕಂದಕ್ ಕೊರೊನಾ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೊಳಗಾದ ಸೋಂಕಿತರ ನೆರವಿಗೆ ಬರುತ್ತಿದ್ದರು. ಸೋಂಕಿತರ ವಿಪರೀತ ಚಿಕಿತ್ಸಾ ವೆಚ್ಚದ ಬಗ್ಗೆಯು ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೇ ರೀತಿಯಲ್ಲಿ ಇಂಡಿಯಾನ ಆಸ್ಪತ್ರೆಯಲ್ಲಿ ಮೃತ ಕೊರೊನಾ ಸೋಂಕಿತರ ಬಿಲ್ ಬಗ್ಗೆ ತಕರಾರು ಎತ್ತಿದ್ದರು. ಈ ಸಂದರ್ಭದಲ್ಲಿ ಇಂಡಿಯಾನ ಆಸ್ಪತ್ರೆ ಆಡಳಿತ ಮಂಡಳಿ ಮಹಿಳಾ ಸಿಬ್ಬಂದಿಗೆ ಕರ್ತವ್ಯ ಅಡ್ಡಿ ಮತ್ತು ಹಲ್ಲೆ ಮಾಡಲಾಗಿದೆ ಎಂದು ದೂರು ದಾಖಲಿಸಿತ್ತು. ಇದೇ ಆಧಾರದಲ್ಲಿ ಸುಹೈಲ್ ಕಂದಕನ್ನು ಪೊಲೀಸರು ಬಂಧಿಸಿದ್ದರು.
ಆದರೆ ಸುಹೈಲ್ ಕಂದಕ್ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳು ಮೆಡಿಕಲ್ ಮಾಫಿಯದ ಬಗ್ಗೆ ಧ್ವನಿಯೆತ್ತಿದ್ದವು. ಸಂಜೆಯ ವೇಳೆಗೆ ಇಂಡಿಯಾನ ಆಸ್ಪತ್ರೆಯಿಂದ ನೀಡಲಾದ ದೂರನ್ನುವಾಪಾಸು ಪಡೆದಿದ್ದು ಇದನ್ನು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ದೃಢಪಡಿಸಿದ್ದರು. ರಾತ್ರಿ9 .30 ರ ವೇಳೆಗೆ ಸುಹೈಲ್ ಕಂದಕನ್ನು ಬಿಡುಗಡೆ ಮಾಡಲಾಗಿದೆ