-->

ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ: ಇಬ್ಬರು ತಮಿಳು ನಟಿಯರು ಸಹಿತ ಐವರ ಬಂಧನ (VIDEO)

ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ: ಇಬ್ಬರು ತಮಿಳು ನಟಿಯರು ಸಹಿತ ಐವರ ಬಂಧನ (VIDEO)

ಥಾಣೆ (ಮಹಾರಾಷ್ಟ್ರ):  ಹೈಟೇಕ್ ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆದಿರುವ ಥಾಣೆಯ ಗುನ್ಹೆ ಯುನಿಟ್ -1ರ ಸಿಸಿಬಿ ತಂಡವು ಇಬ್ಬರು ತಮಿಳು ನಟಿಯರು ಸೇರಿದಂತೆ ಐವರನ್ನು ಬಂಧಿಸಿದೆ.
ಮುಂಬೈನ ಸೆಕ್ಸ್ ರಾಕೆಟ್ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ ಈ ಇಬ್ಬರು ತಮಿಳು ನಟಿಯರು ಈ ಏಜೆಂಟ್ ಮೂಲಕ ವೇಶ್ಯಾವಾಟಿಕೆಗಾಗಿ ಥಾಣೆಗೆ ಬಂದಿದ್ದರು. ಇವರು ಏಜೆಂಟರಿಗೆ 2 ಲಕ್ಷ ರೂ. ಬೇಡಿಕೆಯಿಟ್ಟಿದ್ದು, ಬಳಿಕ 1.80 ಲಕ್ಷ ರೂ.ಗೆ ವ್ಯವಹಾರ ಕುದುರಿಸಲಾಗಿತ್ತು ಎನ್ನಲಾಗಿದೆ.
 
ಆರೋಪಿಗಳನ್ನು ಬಂಧಿಸಿದ ಪೊಲೀಸರು ಏಜೆಂಟ್ ಜೊತೆ ಡೀಲ್ ಮಾಡಿಕೊಂಡ ಇಬ್ಬರು ಥಾಣೆಯ ಪಚ್​ಪಖಡಿಯಲ್ಲಿರುವ ನಟರಾಜ್ ಸೊಸೈಟಿಯ ಫ್ಲ್ಯಾಟ್​ಗೆ ನಿಗದಿತ ಸಮಯಕ್ಕೆ ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಫ್ಲ್ಯಾಟ್​​ ಮೇಲೆ ದಾಳಿ ನಡೆಸಿದ್ದು, ಇಬ್ಬರು ನಟಿಯರು, ಫ್ಲ್ಯಾಟ್ ಮಾಲೀಕ, ಓರ್ವ ಪುರುಷ ಮತ್ತು ಓರ್ವ ಮಹಿಳಾ ಏಜೆಂಟರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತ ಇಬ್ಬರೂ ನಟಿಯರು ಪ್ರಮುಖ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್​​ನ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಟಿವಿ ಧಾರವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಐವರ ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಹಲವು ನಟಿಯರ ಫೋಟೋಗಳು ಕಂಡು ಬಂದಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99