ಜಾನುವಾರು ಮೇಯಿಸುತ್ತಿದ್ದ 10ರ ಬಾಲಕಿಯ ಮೇಲೆರಗಿದ ಕಾಮುಕರು: ರೇಪ್ ನಡೆಯುವ ಮುನ್ನವೇ ಸಿಕ್ಕಿಬಿದ್ದರು ಕಿರಾತಕರು
Friday, June 4, 2021
ವಿಜಯವಾಡ: ಜಾನುವಾರುಗಳನ್ನು ಮೇಯಿಸುತ್ತಿದ್ದ 10 ವರ್ಷದ ಬಾಲಕಿಯ ರೇಪ್ ಗೆ ಯತ್ನಿಸಿರುವ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಚಾಬ್ರೋಲ್ ಮಂಡಲದ ಮಂಚಲಾ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ಗ್ರಾಮದ ಸಮೀಪದಲ್ಲಿಯೇ ಜಾನುವಾರುಗಳನ್ನು ಮೇಯಿಸುತ್ತಿದ್ದಳು. ಅಲ್ಲಿಯೇ ಪಕ್ಕದಲ್ಲಿದ್ದ ಸೇತುವೆಯೊಂದರ ಕೆಳಗೆ ಆರೋಪಿ ಯುವಕರಿಬ್ಬರು ಮದ್ಯ ಸೇವಿಸುತ್ತಾ ಕುಳಿತಿದ್ದರು. ಪಾನಮತ್ತರಾಗಿದ್ದ ಯುವಕರು ಬಾಲಕಿಯನ್ನು ಎಳೆದುಕೊಂಡು ಹತ್ತಿರದಲ್ಲೇ ಇದ್ದ ಪೊದೆಯೊಳಗೆ ಕರೆದೊಯ್ದು ರೇಪ್ ಮಾಡಲು ಯತ್ನಿಸಿದ್ದಾರೆ.
ಈ ಸಂದರ್ಭ ಬಾಲಕಿ ಬೊಬ್ಬೆ ಹಾಕಿದ್ದಾಳೆ. ಅದನ್ನು ಗಮನಿಸಿದ ದಾರಿಹೋಕರು ಬಾಲಕಿಯನ್ನು ರಕ್ಷಿಸಿ, ಯುವಕರಿಬ್ಬರಿಗೆ ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಚಾಬ್ರೋಲ್ ಮಂಡಲದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮತ್ತು ಸಂತ್ರಸ್ತೆಯನ್ನು ಜತೆಗೆ ಕರೆದೊಯ್ದು ವಿಚಾರಣೆ ನಡೆಸಿ ದೂರು ದಾಖಲಿಸಿಕೊಂಡು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.