JIO ದಿಂದ ಬರಲಿದೆ 5 ಜಿ ಪೋನ್- ಕಡಿಮೆ ಬೆಲೆಯ ಈ ಸ್ಮಾರ್ಟ್ ಪೋನ್ ಬಿಡುಗಡೆ ದಿನಾಂಕ ಫಿಕ್ಸ್!
Thursday, June 24, 2021
ನವದೆಹಲಿ: ರಿಲಯನ್ಸ್ ಇಂಡಸ್ಟ್ರಿಯ ಅಧ್ಯಕ್ಷ ಮುಖೇಶ್ ಅಂಬಾನಿ ನೂತನ ದಾಖಲೆ ಬರೆಯಲು ಹೊರಟಿದ್ದಾರೆ. ಜಿಯೋ ಸಂಸ್ಥೆಯ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿರುವ ಅವರು ಈ ಬಗ್ಗೆ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಅತಿ ಕಡಿಮೆ ಬೆಲೆಗೆ ಜಿಯೋ ಫೋನ್ ನೆಕ್ಸ್ಟ್(JIOPHONE NEXT) ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆಂದು ಹೇಳಿರುವ ಮುಖೇಶ್ ಅಂಬಾನಿಯವರು, ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿಯ ದಿನ ಮಾರುಕಟ್ಟೆಗೆ ಈ ಫೋನ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಜಿಯೋ ಫೋನ್ ನೆಕ್ಸ್ಟ್ ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಆಂಡ್ರಾಯ್ಡ್ ಒಎಸ್ ಅಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಅತ್ಯಾಧುನಿಕ ಫೀಚರ್ಸನ್ನು ಒಳಗೊಂಡಿದೆ. ಗೂಗಲ್ ಮತ್ತು ಜಿಯೋ ಸೇರಿ ಈ ಸ್ಮಾರ್ಟ್ಫೋನ್ ಅಭಿವೃದ್ಧಿಪಡಿಸಿವೆ ಎಂದು ಘೋಷಣೆ ಮಾಡಲು ನನಗೆ ಸಂತೋಷವಾಗುತ್ತದೆ. ಇದರಲ್ಲಿನ ಅಪ್ಲಿಕೇಶನ್ ಬಳಕೆದಾರರ ಫ್ರೆಂಡ್ಲಿ ಆಗಿವೆ. ದೇಶದಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಜಿಯೋ ಫೈಬರ್ ಒಂದೇ ವರ್ಷದಲ್ಲಿ 2 ಮಿಲಿಯನ್ ಗ್ರಾಹಕರ ಹೊಂದಿದ್ದು, ಈಗಾಗಲೇ 3 ಮಿಲಿಯನ್ ಸಕ್ರಿಯ ಬಳಕೆದಾರರು ಇದ್ದಾರೆ ಎಂದಿದ್ದಾರೆ.
ಜಿಯೋ ಫೈಬರ್ ಭಾರತದ ಅತಿದೊಡ್ಡ ಬ್ರಾಡ್ಬ್ಯಾಂಡ್ ಆಪರೇಟರ್ ಆಗಿದೆ. ಭಾರತದಲ್ಲಿ ಡಿಜಿಟಲೀಕರಣ ಮಾಡುವ ಉದ್ದೇಶದಿಂದ 2016ರಲ್ಲಿ ಜಿಯೋ ಆರಂಭ ಮಾಡಿದ್ದೆವು. ಆದರೆ ಇದೀಗ ಹೊಸ ಉದ್ದೇಶದೊಂದಿಗೆ ಮತ್ತೊಂದು ವ್ಯವಹಾರಕ್ಕೆ ಕೈಹಾಕಿದ್ದು, ಇಂಧನ ವ್ಯವಹಾರಕ್ಕಾಗಿ 60,000 ಕೋಟಿ ರೂ. ಮೀಸಲಿಡುತ್ತಿದ್ದೇವೆ. ರಿಲಯನ್ಸ್ನಿಂದ ನಿವೃತ್ತ ನೌಕರರು, ಕಂಪೆನಿ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಸೇರಿದಂತೆ 20 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ನೀತಾ ಅಂಬಾನಿ ತಿಳಿಸಿದ್ದಾರೆ. ಕಳೆದ ವಾರ್ಷಿಕ ಸಭೆಗೆ ಹೋಲಿಕೆ ಮಾಡಿದಾಗ ನಮ್ಮ ವ್ಯವಹಾರ ಮತ್ತು ಆರ್ಥಿಕತೆ ಮತ್ತಷ್ಟು ಹೆಚ್ಚಾಗಿದ್ದು, ಇದರಿಂದ ಸಂತೋಷವಾಗಿದೆ ಎಂದು ಹೇಳಿಕೊಂಡರು.