ಏಲಿಯನ್ ಗಳ ಲೋಕಕ್ಕೆ ಹೋಗಿರುವೆ, ಲವ್ ಅಗಿದೆ... ಎಂದು ಎಲ್ಲರಿಗೂ ಶಾಕ್ ನೀಡಿದ ಬ್ರಿಟಿಷ್ ನಟಿ
Monday, June 21, 2021
ಲಂಡನ್: ತಮ್ಮ ಬೆಡ್‌ರೂಮ್ ಗೆ ಏಲಿಯನ್ ಬಂದು ತಮ್ಮನ್ನು ಅನ್ಯಗ್ರಹಕ್ಕೆ ಕರೆದುಕೊಂಡು ಹೋಗಿರುವುದಾಗಿ ಹೇಳಿರುವ ಬ್ರಿಟನ್ ನಟಿಯೊರ್ವರು, ಭೂಮಿಯ ಮೇಲಿರುವ ಪುರುಷನಿಗಿಂತಲೂ ಏಲಿಯನ್ ಗಳೇ ಬೆಸ್ಟ್ ಎಂದು ಹೇಳಿದ್ದಾರೆ. ತಮಗರ ಅವುಗಳ ಜತೆ ಲವ್ ಆಗಿದ್ದು, ಮುಂದಿನ ಡೇಟಿಂಗ್‌ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಈ ನಟಿಯ ಹೆಸರು ಅಬ್ಬಿ ಬೆಲಾ. ಇವರು ಸದಾ ಏಲಿಯನ್ ಗಳ ಬಗ್ಗೆ ಚಿಂತಿಸುತ್ತಿದ್ದರಂತೆ. ಅನ್ಯಗ್ರಹಜೀವಿ ತನ್ನನ್ನು ಅಪಹರಿಸಬೇಕೆಂದು ಆನ್‌ಲೈನ್‌ನಲ್ಲಿ ಸದಾ ತಮಾಷಾ ಮಾಡುತ್ತಿದ್ದರಂತೆ. ವಿಚಿತ್ರ ಎಂದರೆ ಅವರು ರಾತ್ರಿ ಮಲಗಿದಾಗ ಅವರಿಗೆ ಕನಸಿನಲ್ಲಿ ಒಂದು ಧ್ವನಿ ಕೇಳಿಸಿದ್ದು, ನಾಳೆ ಕಿಟಕಿಯ ಪಕ್ಕದಲ್ಲಿ ಕುಳಿತಿರು ಎಂದಿತ್ತಂತೆ. ಅಚ್ಚರಿಗೊಂಡ ಅವರು ಮಾರನೇ ದಿನ ಹಾಗೇ ಮಾಡಿದ್ದಾರೆ. ಆದರೆ ಅಲ್ಲಿಯೇ ನಿದ್ದೆಗೆ ಜಾರಿದೆ. ಅವರು ನಿದ್ರೆಗೆ ಜಾರುತ್ತಿದ್ದಂತೆ, ಹೊರಗೆ ಹಾರುವ ತಟ್ಟೆ ಕಾಣಿಸಿಕೊಂಡಿದೆ. ಬೆಡ್‌ರೂಮ್ ಬಳಿಯೇ ಪ್ರಕಾಶಮಾನವಾದ ಹಸಿರು ಕಿರಣ ಕಾಣಿಸಿದೆ. ಬೆಡ್‌ರೂಂ ಒಳಗೇ ಬಂದ ಏಲಿಯನ್ ನನ್ನನ್ನು ಎಲ್ಲಿಯೋ ಕರೆದೊಯ್ಯಿತು. ಅಲ್ಲಿ ಐದು ಏಲಿಯನ್ಸ್ ಇದ್ದವು. ಅದರಲ್ಲಿ ಒಂದು ಮನುಷ್ಯರನ್ನು ಹೋಲುತ್ತಿತ್ತು. ತುಂಬಾ ಎತ್ತರ ಮತ್ತು ತೆಳ್ಳಗಿತ್ತು. ಅಲ್ಲಿ ನಾನು ಕೆಲ ಕಾಲ ಕಳೆದೆ. ಪುನಃ ಅವುಗಳ ನನ್ನನ್ನು ಮನೆಗೆ ಹಿಂದಿರುಗಿಸಿದವು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮೊದಲು ಇದನ್ನು ನಾನು ನನ್ನ ಕನಸು ಎಂದುಕೊಂಡೆ. ಆದರೆ ನಿಜಕ್ಕೂ ಅದು ಕನಸಾಗಿರಲಿಲ್ಲ. ನಾನು ಹೋಗಿರುವುದು ನಿಜ. ಅಷ್ಟೇ ಅಲ್ಲದೇ ಇನ್ನೂ ಅಚ್ಚರಿ ವಿಷಯ ಎಂದರೆ ಮಧ್ಯರಾತ್ರಿ ನಾಲ್ಕು ಗಂಟೆಯ ಬಳಿಕ ಅವರು ಬೆಡ್‌ರೂಮ್‌ನಿಂದ ಕಾಣೆಯಾಗಿದ್ದು, ಎಲ್ಲಿ ಹುಡುಕಿದರೂ ಸಿಗಲಿಲ್ಲ, ಬೆಳಗ್ಗೆ ಪುನಃ ಹಾಸಿಗೆ ಮೇಲೆ ಇದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ಘಟನೆಗಳು ನಡೆದಿರುವುದು ವರದಿಯಾಗಿದ್ದು, ಈ ಬಗ್ಗೆ ವಿಜ್ಞಾನಿಗಳು ಇನ್ನಷ್ಟು ತಲೆ ಕೆಡಿಸಿಕೊಂಡಿದ್ದಾರೆ.