ಸ್ಯಾಮ್‌ಸಂಗ್ ನಿಂದ ಭಾರತೀಯ ಗ್ರಾಹಕರಿಗೆ ಜೂ.23ರಿಂದ ನೂತನ ಟ್ಯಾಬ್ ಮಾರುಕಟ್ಟೆಗೆ
Monday, June 21, 2021
ನವದೆಹಲಿ: ಸ್ಯಾಮ್‌ಸಂಗ್ ಭಾರತೀಯ ಗ್ರಾಹಕರಿಗಾಗಿ ಹೊಸ ಟ್ಯಾಬ್‌ಗಳಾದ ಗ್ಯಾಲಕ್ಸಿ ಟ್ಯಾಬ್ ಎಸ್ 7 ಎಫ್‌ಇ ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಜೂನ್ 23 ರಂದು ಬಿಡುಗಡೆ ಮಾಡಲಿದೆ. ಗ್ಯಾಲಕ್ಸಿ ಟ್ಯಾಬ್ ಎಸ್ 7 ಎಫ್‌ಇ 4 ಜಿಬಿ + 64 ಜಿಬಿ ಹೊಂದಿದ್ದು ಇದರ ಮಾರುಕಟ್ಟೆ ಬೆಲೆ 46,999 ರೂ.ಆಗಿದೆ.
ಅದೇ ರೀತಿ 6 ಜಿಬಿ + 128 ಜಿಬಿ ಹೊಂದಿರುವ ಟ್ಯಾಬ್ಗೆ 50,999 ರೂ ಇದೆ. ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ 3 ಜಿಬಿ + 32 ಜಿಬಿಯಲ್ಲಿ ಲಭ್ಯವಿದೆ. ಎಲ್‌ಟಿಇಗೆ 14,999 ರೂ ಮತ್ತು ವೈಫೈ ಮಾದರಿಗೆ 11,999 ರೂ. ಇದೆ. ಇದರಲ್ಲಿ ರಿಮೋಟ್ ವರ್ಕಿಂಗ್ ಮತ್ತು ವರ್ಚುವಲ್ ಲರ್ನಿಂಗ್ ಹೊಸ ಫೀಚರ್ ಇದೆ.
ಈ ಹೊಸ ಟ್ಯಾಬ್‌ಗಳು ಹೆಚ್ಚು ಉತ್ಪಾದಕ, ಹೆಚ್ಚು ಸೃಜನಶೀಲ, ಬಹು-ಕಾರ್ಯಗಳನ್ನು ಸುಲಭವಾಗಿ ಮಾಡಲು ಸಹಾಯ ಮಾಡುತ್ತದೆ. ಈ ಟ್ಯಾಬ್ ಗಳು ಬಳಕೆದಾರರು ಕೆಲಸ ಮಾಡುವ, ಅಧ್ಯಯನ ಮಾಡುವ ಮತ್ತು ಆಡುವ ವಿಧಾನವನ್ನು ಮರು ವ್ಯಾಖ್ಯಾನಿಸುತ್ತದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ಬ್ಯುಸಿನೆಸ್ ನಿರ್ದೇಶಕ ಮಾಧುರ್ ಚತುರ್ವೇದಿ ತಿಳಿಸಿದ್ದಾರೆ.
ಇದು 16:10 ಆಕಾರ ಅನುಪಾತ ಚಿತ್ರವನ್ನು ಬೆಂಬಲಿಸುವ ದೊಡ್ಡ 12.4 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಚಿತ್ರ ವಿವರಗಳ ಪ್ರತಿ ಇಂಚಿಗೆ 244 ಪಿಕ್ಸೆಲ್‌ಗಳು (ಪಿಪಿಐ) ರೆಸಲ್ಯೂಶನ್ ಹೊಂದಿದೆ. ಗ್ಯಾಲಕ್ಸಿ ಟ್ಯಾಬ್ ಎಸ್ 7 ಎಫ್‌ಇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750 ಜಿ ಪ್ರೊಸೆಸರ್ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 8 ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು 5 ಎಂಪಿ ಫ್ರಂಟ್ ಲ್ಯಾಂಡ್‌ಸ್ಕೇಪ್ ಮೋಡ್ ಕ್ಯಾಮೆರಾವನ್ನು ಹೊಂದಿದೆ. ಇದನ್ನು ವೀಡಿಯೊ ಕರೆಗಳಿಗೆ ಹೊಂದುವಂತೆ ಮಾಡಲಾಗಿದೆ. ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್‌ನೊಂದಿಗೆ ಡ್ಯುಯಲ್ ಸ್ಪೀಕರ್ ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ನೊಂದಿಗೆ 1 ಜಿಬಿವರೆಗೆ ವಿಸ್ತರಿಸಬಹುದಾದ 32 ಜಿಬಿ ಆಂತರಿಕ ಸಂಗ್ರಹವಿದೆ. 1.8GHz ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 22 ಟಿ (ಎಂಟಿ 8768 ಟಿ) ಪ್ರೊಸೆಸರ್ ಸುಗಮ ಮತ್ತು ವೇಗದ ಗೇಮಿಂಗ್ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.ಇನ್ನು ಗ್ಯಾಲಕ್ಸಿ ಟ್ಯಾಬ್ ಎಸ್ 7 ಎಫ್‌ಇ ನಾಲ್ಕು ಅದ್ಭುತ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮಿಸ್ಟಿಕ್ ಕಪ್ಪು, ಮಿಸ್ಟಿಕ್ ಸಿಲ್ವರ್, ಮಿಸ್ಟಿಕ್ ಗ್ರೀನ್ ಮತ್ತು ಮಿಸ್ಟಿಕ್ ಪಿಂಕ್. ಆದರೆ, ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಬೂದು ಮತ್ತು ಬೆಳ್ಳಿಯ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ.