
ಶಿಲ್ಪಾ ಶೆಟ್ಟಿ ಪತಿಯ ಅಕ್ರಮ ಸಂಬಂಧ ವಿಚಾರ- ಕುಡ್ಲದ ಹುಡುಗಿ ಗಂಡನ ಹಳೆಕಥೆಗೆ ಹೇಳಿದ್ದು ಹೀಗೆ...
Wednesday, June 16, 2021
ಮುಂಬೈ: ರಾಜ್ ಕುಂದ್ರಾ ಅವರು ಕವಿತಾರಿಗೆ ವಿಚ್ಛೇದನ ನೀಡಿದ್ದ ಸಂದರ್ಭದಲ್ಲಿ ಈ ಡಿವೋರ್ಸ್‌ಗೆ ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದರು. ಆದರೆ ಅವರು ತನ್ನಮೊದಲ ಪತ್ನಿಯಿಂದ ಏಕೆ ವಿಚ್ಛೇದನ ಪಡೆದದ್ದು ಎಂಬ ಸತ್ಯ ಕಾರಣವನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಈ ಬಗ್ಗೆ ತಿಳಿಸಿದ ಅವರು ನನ್ನ ಮೊದಲ ಪತ್ನಿ ಕವಿತಾ ನನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ನಮ್ಮ ತಾಯಿ ಕಣ್ಣಾರೇ ಕಂಡಿದ್ದರು. ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ ಅವರಿಬ್ಬರ ನಡುವಿನ ಮೊಬೈಲ್ ಸಂದೇಶಗಳನ್ನು ನೋಡಿದೆ. ಆಗ ಮೋಸ ಮಾಡುವುದು ತಿಳಿದಿದೆ, ಇದಕ್ಕಾಗಿ ವಿಚ್ಛೇದನ ಕೊಟ್ಟಿದ್ದೇನೆ ಎಂದಿದ್ದರು.
ಈ ಹೇಳಿಕೆ ನೀಡಿದ ಒಂದು ಗಂಟೆಯಲ್ಲಿಯೇ ಕುಂದ್ರಾ ಅವರ ಎರಡನೆಯ ಪತ್ನಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಕೆಲವು ಭಾವನಾತ್ಮಕ ಶೇರ್ ಮಾಡಿದ್ದರು. ಪುಸ್ತಕದಲ್ಲಿರುವ ಕೆಲವು ಸಾಲುಗಳನ್ನು ಅವರು ಶೇರ್ ಮಾಡಿಕೊಂಡಿದ್ದರು. ಆದರೆ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅದರ ಸ್ಕ್ರೀನ್‌ಷಾಟ್ ಹರಿದಾಡುತ್ತಿದೆ. ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪುಸ್ತಕದ ಸಾಲುಗಳು ಹೀಗೆ ಹೇಳುತ್ತವೆ. ‘ಒಳ್ಳೆಯವರಿಗೆ ಬೇಸರವಾದರೆ, ಅವನ ಜತೆ ಇರುವ ಒಳ್ಳೆಯವರು ಕೂಡ ನೋವುಣ್ಣುತ್ತಾರೆ. ಕೆಲವೊಮ್ಮೆ ಒಳ್ಳೆಯವರಿಗೆ ಕೆಟ್ಟದ್ದಾದರೆ ನಾವು ಅದನ್ನು ನೋಡಿದರೂ ಏನೂ ಮಾಡದ ಸ್ಥಿತಿಯಲ್ಲಿ ಇರುತ್ತೇವೆ. ಏಕೆಂದರೆ ಆ ಘಟನೆಗಳು ನಮ್ಮಕೈಮೀರಿ ಹೋಗಿರುತ್ತವೆ ಅಥವಾ ಅವು ನಮಗೆ ಸಂಬಂಧಿಸಿದ್ದು ಆಗಿರುವುದಿಲ್ಲ’ ಎಂದಿದೆ.
ಪುಸ್ತಕದ ಇನ್ನೊಂದು ಹಾಳೆಯಲ್ಲಿರುವ ಬರಹಗಳು ಹೀಗಿವೆ: ‘ಒಂದೊಮ್ಮೆ ಒಳ್ಳೆಯ ವ್ಯಕ್ತಿ ಮೇಲೆ ದಾಳಿ ಆದರೆ, ಗಾಯವಾದರೆ ಅಥವಾ ಅವರನ್ನು ಜೈಲಿಗೆ ಹಾಕಿದರೆ ಅವರಿಗೆ ನಾವು ನೀಡುತ್ತಿರುವ ರಕ್ಷಣೆ ಕಡಿಮೆಯಾಗಿದೆ ಎಂದೇ ಅರ್ಥ’ ಎಂದಿದ್ದಾರೆ. ಇದರ ಒಳಾರ್ಥವೇನು ಎಂದು ಚರ್ಚೆಯಾಗುತ್ತಿರುವ ನಡುವೆಯೇ ಶಿಲ್ಪಾ ಶೆಟ್ಟಿ ಅದನ್ನು ಡಿಲೀಟ್ ಮಾಡಿಬಿಟ್ಟಿದ್ದಾರೆ. ಆದರೂ ಅವರ ಅಭಿಮಾನಿಗಳು ನೂರೊಂದು ರೀತಿಯಲ್ಲಿ ಯೋಚನೆ ಶುರು ಮಾಡಿದ್ದಾರೆ. ಶಿಲ್ಪಾ ಯಾವ ಉದ್ದೇಶಕ್ಕೆ ಈ ಪೋಸ್ಟ್ ಮಾಡಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿಲ್ಲ ಎಂದಿದ್ದಾರೆ.