ಲೈಂಗಿಕ ಕಿರುಕುಳ ಸಹಿಸಲಾಗದೆ ಸಾವಿನ ಹಾದಿ ಹಿಡಿದ ಮಹಿಳೆ...
Monday, June 28, 2021
ಆದಿಲ್ಬಾದ್: ಎದುರು ಮನೆಯ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಸಹಿಸದ ವಿವಾಹಿತೆ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಆದಿಲ್ಬಾದ್ ಜಿಲ್ಲೆಯ ಪೆಂಚಿಕಲ್ಪೇಟ್ನಲ್ಲಿ ನಡೆದಿದೆ.
ವಿವಾಹಿತೆ ಆಗಿರುವ ಮಹಿಳೆಗೆ ಒಂದು ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾನು ವಾಸವಿದ್ದ ಎದುರು ಮನೆಯಲ್ಲಿ ನೆಲೆಸಿದ್ದ ಕೃಷ್ಣ ಎಂಬಾತ ಮೂರು ವರ್ಷಗಳಿಂದ ಈಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅನೇಕ ಬಾರಿ ಎಚ್ಚರಿಕೆ ನೀಡಿದಾದರೂ ತನ್ನ ಕೃತ್ಯವನ್ನು ಮಾತ್ರ ನಿಲ್ಲಿಸಿರಲಿಲ್ಲ. ಎರಡು ವರ್ಷದ ಹಿಂದೆ ಕೃಷ್ಣನ ಕಿರುಕುಳ ತಾಳದೇ ತನ್ನ ಗಂಡನೊಂದಿಗೆ ಈಕೆ ದೂರು ಸಹ ನೀಡಿದ್ದಳು. ಈ ವೇಳೆ ಕೃಷ್ಣನನ್ನು ಬಂಧಿಸಿದ್ದರು. ಬಿಡುಗಡೆಯಾಗಿದ್ದ ಕೃಷ್ಣ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಆದರೆ, ಕಿರುಕಳ ಸಹಿಸದೇ ಕೀಟನಾಶಕ ಸೇವಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆರೋಪಿ ಕೃಷ್ಣನಿಗೆ ಕಠಿಣ ಶಿಕ್ಷೆ ನೀಡುವಂತೆ ಮಹಿಳೆ ಕುಟುಂಬಸ್ಥರು ಪೊಲೀಸರ ಬಳಿ ಒತ್ತಾಯಿಸಿದ್ದಾರೆ.