
ಫೋನ್ ಖರೀದಿಗೆ 12 ಮಾವಿನ ಹಣ್ಣು ಮಾರಿದ ಬಾಲಕಿಗೆ ಸಿಕ್ಕಿದ್ದು ಲಕ್ಷ ...ಲಕ್ಷ...!
Monday, June 28, 2021
ಜಾರ್ಖಂಡ್: ಆನ್ಲೈನ್ ಕ್ಲಾಸಿಗೆ ಸ್ಮಾರ್ಟ್ ಫೋನ್ ಬೇಕು ಆದರೆ ಫೋನ್ ಖರೀದಿಸಲು ದುಡ್ಡಿಲ್ಲದೆ ಏನು ಮಾಡುವುದು ಎಂದು ಆತಂಕದಲ್ಲಿದ್ದಾರೆ ಮಾವಿನಹಣ್ಣಿನ ವ್ಯಾಪಾರಕ್ಕಿಳಿದ ಬಾಲಕಿಯ ಬಾಳಲ್ಲಿ ಅದೃಷ್ಟದ ಬಾಗಿಲು ತೆರೆದಿದೆ.
ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳಸಿ ಕುಮಾರಳ ಕಡುಬಡತನದ ಕುಟುಂಬವಾಗಿದ್ದು, ಈಕೆಗೆ ಆನ್‌ಲೈನ್ ಕ್ಲಾಸ್‌ಗೆ ಫೋನ್ ಬೇಕಿತ್ತು. ಆದರೆ ಮೊಬೈಲ್ ಖರೀದಿಗೆ ದುಡ್ಡು ಇರಲಿಲ್ಲ. ತನಗೆ ಯಾರಾದರೂ ಸಹಾಯ ಮಾಡಿ ಎಂದು ಚಾನೆಲ್ ಒಂದರಲ್ಲಿ ಈಕೆ ಕೋರಿಕೊಂಡಳು. ಆದರೆ ಆ ಮನವಿ ಈಡೇರಲಿಲ್ಲ. ಈಕೆಗೆ ಯಾವ ಸಹಾಯವೂ ಸಿಗಲಿಲ್ಲ.
ಕೊನೆಗೆ ಈಕೆ ಮಾವಿನಹಣ್ಣಿನ ಮಾರಾಟಕ್ಕೆ ನಿಂತಳು. ಈ ವಿಷಯ ಇಲ್ಲಿರುವ ವ್ಯಾಲುಯೇಬಲ್ ಎಜುಟೇನ್ಮೆಂಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಮೆಯಾ ಅವರ ಕಿವಿಗೆ ಬಿತ್ತು. ಸ್ವಂತ ದುಡಿಮೆಯಿಂದ ಶಿಕ್ಷಣ ಪಡೆಯಲು ಈಕೆ ಇಚ್ಛಿಸಿರುವುದನ್ನು ಕಂಡು, ಈ ಬಾಲಕಿಯಿಂದ ಒಂದು ಡಜನ್ ಮಾವಿನ ಹಣ್ಣನ್ನು ಖರೀದಿಸಿದರು. ನಂತರ ಆಕೆಯ ತಂದೆಯ ಬಳಿಗೆ ಹೋಗಿ ಈ ಡಜನ್ ಮಾವಿನಹಣ್ಣಿಗೆ 1.20ಲಕ್ಷ ರೂಪಾಯಿ ನೀಡಿದರು.
ಅವಳ ಶೈಕ್ಷಣಿಕ ಭವಿಷ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನೂ ಈ ಹಣದಿಂದ ಮಾಡುವಂತೆ ಅವರು ಹೇಳಿದ್ದಾರೆ. ಇದು ದೇಣಿಗೆಯಲ್ಲ, ಬದಲಿಗೆ ಮಾವಿನಹಣ್ಣುಗಳನ್ನು ಖರೀದಿ ಮಾಡಿದ್ದೇನೆ. ಜೀವನದಲ್ಲಿ ಹೋರಾಡುವುದನ್ನು ಬಿಡಬೇಡ ಎಂದು ಆಕೆಗೆ ಪ್ರೋತ್ಸಾಹ ನೀಡಲು ಈ ನೆರವು ಎಂದಿದ್ದಾರೆ.