-->

ಮಕ್ಕಳನ್ನು ಬಿಟ್ಟು ಭಾವನೊಂದಿಗೆ ಪರಾರಿಯಾದ ಕಿರಾತಕಿ...ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ..?

ಮಕ್ಕಳನ್ನು ಬಿಟ್ಟು ಭಾವನೊಂದಿಗೆ ಪರಾರಿಯಾದ ಕಿರಾತಕಿ...ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ..?

ಎರವಿಪುರಂ(ಕೊಲ್ಲಂ): ಮಕ್ಕಳನ್ನು ಬಿಟ್ಟು ಆಕೆಯ ಸಹೋದರಿಯ ಗಂಡನ ಜೊತೆ ಪರಾರಿಯಾಗಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. 

ಕೊಲ್ಲಂನ ಮುಂಡಕ್ಕಲ್​ ನಿವಾಸಿ ಐಶ್ವರ್ಯಾ (28) ಮತ್ತು ಆಕೆಯ ಸಹೋದರಿಯ ಗಂಡ ಸಂಜಿತ್​ (36) ಎಂಬಾತನನ್ನು ಮದುರೈನಲ್ಲಿ ಬಂಧಿಸಲಾಗಿದೆ. ಸಂಜಿತ್​ಗೆ ಇಬ್ಬರು ಮಕ್ಕಳಿದ್ದು, ಐಶ್ವರ್ಯಾಗೆ ಒಂದು ಮಗುವಿದೆ. 

ಐಶ್ವರ್ಯಾ ನಾಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಎರವಿಪುರಂ ಪೊಲೀಸ್​ ಠಾಣೆಯಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಬ್ಬರು ನಕಲಿ ಹೆಸರಿನಲ್ಲಿ ಟಿಕೆಟ್​ ಪಡೆದ ಮದುರೈಗೆ ಪ್ರಯಾಣ ಬೆಳೆಸಿದ್ದರು. ರೈಲ್ವೇ ಪೊಲೀಸರು ಇಬ್ಬರ ಫೋಟೋಗಳನ್ನು ಕಳುಹಿಸಿದ ಬಳಿಕ ಐಶ್ವರ್ಯಾ ಮತ್ತು ಸಂಜಿತ್​ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರನ್ನು ಎರವಿಪುರಂ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99