-->

'ನಿನ್ನ ಆ ಭಾಗ ಕಾಣಿಸುತ್ತಿದೆ' ಎಂದು ಜಿಮ್ಮಿನಲ್ಲಿ ಅವಮಾನ..ವಿಡಿಯೋ ಮಾಡಿ ನೋವು ಹಂಚಿಕೊಂಡ ಮಹಿಳೆ..

'ನಿನ್ನ ಆ ಭಾಗ ಕಾಣಿಸುತ್ತಿದೆ' ಎಂದು ಜಿಮ್ಮಿನಲ್ಲಿ ಅವಮಾನ..ವಿಡಿಯೋ ಮಾಡಿ ನೋವು ಹಂಚಿಕೊಂಡ ಮಹಿಳೆ..

 ನವದೆಹಲಿ: ದಪ್ಪ ಇರೋ ಕಾರಣಕ್ಕೆ ಸಣ್ಣ ಆಗಬೇಕೆಂದು ಮಹಿಳೆಯೊಬ್ಬಳು ಜಿಮ್ಮಿಗೆ ಸೇರಿದ್ದು ಜಿಮ್ಮಿನಲ್ಲಿ ವರ್ಕೌಟ್ ಮಾಡುತ್ತಿರಬೇಕಾದರೆ ನಿನ್ನ ಆ ಭಾಗ ಕಾಣಿಸುತ್ತಿದೆ ಎಂದು ಅವಹೇಳನ ಮಾಡಿ ಜಿಮ್ ನಿಂದ ಹೊರಗಡೆ ಹಾಕಿದ್ದಾರೆ.

ಇದರಿಂದ ನೋವು ಮತ್ತು ಅವಮಾನ ಆಯಿತು ಎಂದು ಹೇಳಿ ಆಕೆ ವಿಡಿಯೋ ಮಾಡಿ ತಮ್ಮ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
ನಾನು ಜಿಮ್​ನಲ್ಲಿ ವರ್ಕ್​ಔಟ್ ಮಾಡುತ್ತಿದ್ದೆ, ಆಗ ಪ್ರೋಗ್ರಾಮ್​ ಕೋ ಆರ್ಡಿನೇಟರ್ ಬಂದು ಹೊರಗೆ ಹೋಗುವಂತೆ ಸೂಚಿಸಿದಳು ಎಂದು ನಡೆದಿದ್ದನ್ನು ವಿವರಿಸಿದ್ದಾಳೆ. 

ಇಷ್ಟಕ್ಕೆಲ್ಲ ಕಾರಣ ಆ ಭಾಗ ಒಂದು ಸ್ವಲ್ಪ ಕಾಣಿಸಿದ್ದು. ‘ಈ ಜಿಮ್​ನಲ್ಲಿ ಒಂದು ಪಾಲಿಸಿ ಇದೆ. ನೀವು ಇಲ್ಲಿ ಸ್ಪೋರ್ಟ್ಸ್​ ಬ್ರಾ ಧರಿಸುವ ಹಾಗಿಲ್ಲ. ಅದರಲ್ಲೂ ಹೊಟ್ಟೆ ಕಾಣಿಸುವಂತಿಲ್ಲ. ನಾನು ಸ್ಪೋರ್ಟ್ಸ್​ ಬ್ರಾ ಧರಿಸಿದ್ದು, ಹೈವೇಸ್ಟ್​ ಲೆಗ್ಗಿಂಗ್ಸ್​ ಹಾಕಿಕೊಂಡಿದ್ದು ಮಧ್ಯೆ ಒಂದು ಸ್ವಲ್ಪ ಹೊಟ್ಟೆಯ ಉಬ್ಬು ಹೊರಕ್ಕೆ ಕಾಣಿಸುತ್ತಿತ್ತು. ಅಷ್ಟಕ್ಕೇ ಅವರು ನನ್ನನ್ನು ಹೊರಕ್ಕೆ ಕಳುಹಿಸಿದ್ದಾರೆ. ಇದೇ ಒಬ್ಬಳು ಸಪೂರ ಇರುವವಳಾಗಿದ್ದರೆ ಅವರು ಹೀಗೆ ಹೇಳುತ್ತಿರಲಿಲ್ಲ. ನನ್ನನ್ನು ಫ್ಯಾಟ್​​ಶೇಮ್ ಮಾಡಿದ್ದಾರೆ’ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99