-->

ಗೊರಕೆ ಹೊಡೆಯದ ವರ ಬೇಕು ಎಂಬ ಜಾಹಿರಾತು ಹಿಂದಿನ ಗುಟ್ಟೇನು?

ಗೊರಕೆ ಹೊಡೆಯದ ವರ ಬೇಕು ಎಂಬ ಜಾಹಿರಾತು ಹಿಂದಿನ ಗುಟ್ಟೇನು?


ನವದೆಹಲಿ: ಇತ್ತೀಚಿಗೆ ದಿನಪತ್ರಿಕೆಯಲ್ಲೊಂದು ವಿಚಿತ್ರ ಜಾಹಿರಾತೊಂದು ಪ್ರಕಟವಾಗಿತ್ತು. ಅದೇನೆಂದರೆ, 30 ವರ್ಷ ದಾಟಿರುವ ಫೆಮಿನಿಸ್ಟ್, ಸೋಶಿಯಲ್ ವರ್ಕರ್ ಯುವತಿಯೋರ್ವಳಿಗೆ 25ರಿಂದ 28 ವಯಸ್ಸಿನ ಹ್ಯಾಂಡ್​ಸಮ್ ಗಂಡು ಬೇಕು. ಆತ ಬ್ಯುಸಿನೆಸ್ ಫ್ಯಾಮಿಲಿಯ ಒಬ್ಬನೇ ಮಗನಾಗಿರಬೇಕು. ಬಂಗಲೆ ಇರಬೇಕು ಅಥವಾ 20 ಎಕರೆ ಫಾರ್ಮ್​ ಹೌಸ್ ಇರಬೇಕು. ಅತಿ ಮುಖ್ಯವಾಗಿ ಆತ ಗೊರಕೆ ಹೊಡೆಯಬಾರದು ಹಾಗೂ ಹೂಸು ಬಿಡಬಾರದು ಎಂದು ಹೇಳಲಾಗಿತ್ತು. ಈ ಎಲ್ಲ ಅರ್ಹತೆ ಇರುವವರು ಮೇಲ್​ ಮಾಡಬಹುದು ಎಂದು ಮೇಲ್​ ಐಡಿ ಒಂದನ್ನು ಕೊಡಲಾಗಿತ್ತು. 

ಅಷ್ಟಕ್ಕೂ ಈ ಜಾಹೀರಾತು ನಿಜವಾದ ವ್ಯಕ್ತಿಯಿಂದ ಬಂದಿದೆಯೇ ಅಥವಾ ಯಾರಾದರೂ ತಮಾಷೆ ಮಾಡಿರಬಹುದೇ ಎಂದು ಬಿಬಿಸಿ ನ್ಯೂಸ್ ಪತ್ತೆ ಹಚ್ಚಿದೆ. ತಂಗಿಯ 30ನೇ ವರ್ಷದ ಬರ್ತ್​ಡೇ ಪ್ರಯುಕ್ತ ಅಣ್ಣನೊಬ್ಬ ಆಕೆಯ ಸ್ನೇಹಿತೆಯೊಂದಿಗೆ ಸೇರಿಕೊಂಡು ಮಾಡಿರುವ ತಮಾಷೆ ಇದು. 

ಈ ಬಗ್ಗೆ ಯುವತಿ ಮಾತನಾಡಿ, 'ಬರ್ತ್​ ಡೇ ದಿನ ಅಣ್ಣ ತನಗೆ ಒಂದು ಮೇಲ್​ ಐಡಿ ಮತ್ತು ಅದರ ಪಾಸ್​ವರ್ಡ್ ಕೊಟ್ಟ. ಅದಾದ ನಂತರ ಪೇಪರ್​ನಲ್ಲಿ ಬಂದ ಜಾಹೀರಾತನ್ನು ಕಳುಹಿಸಿದ. ಇಮೇಲ್ ತೆರೆದು ನೋಡಿದಾಗ ಜನರು ಸಿಕ್ಕಾಪಟ್ಟೆ ಬೈದಿರುವುದು ನನ್ನ ಕಣ್ಣಿಗೆ ಬಿದ್ದಿದೆ. ಸಾವಿರಾರು ಮೇಲ್​ಗಳಲ್ಲಿ ಜನರು ಬೈದಿದ್ದಾರೆ' ಎಂದಿದ್ದಾಳೆ ಬರ್ತ್​ಡೇ ಆಚರಿಸಿಕೊಂಡಿರುವ ಯುವತಿ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99