-->

ಚಲಿಸುತ್ತಿದ್ದ ಫ್ಲೈಟ್ ನಿಂದಲೇ ಹಾರಿ ಬೆಚ್ಚಿಬೀಳಿಸಿದ ಪ್ರಯಾಣಿಕ!

ಚಲಿಸುತ್ತಿದ್ದ ಫ್ಲೈಟ್ ನಿಂದಲೇ ಹಾರಿ ಬೆಚ್ಚಿಬೀಳಿಸಿದ ಪ್ರಯಾಣಿಕ!


ಲಾಸ್​ ಏಂಜಲೀಸ್: ಚಲಿಸುತ್ತಿರುವ ಫ್ಲೈಟ್ ನಿಂದಲೇ ಪ್ರಯಾಣಿಕನೊಬ್ಬ ಕೆಳಗೆ ಹಾರಿ ಎಲ್ಲರನ್ನೂ ಬೆಚ್ಚಿಬೀಳಿಸಿದ ವಿಚಿತ್ರ ಘಟನೆಯೊಂದು ಅಮೆರಿಕದ ಲಾಸ್​ ಏಂಜಲೀಸ್​ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

ಸಾಲ್ಟ್​ ಲೇಕ್ ಸಿಟಿಗೆ ಹೊರಟಿದ್ದ ಸ್ಕೈವೆಸ್ಟ್​ ಕಂಪೆನಿಯ ಯುನೈಟೆಡ್ ಎಕ್ಸ್​​ಪ್ರೆಸ್​ ವಿಮಾನವು ರಾತ್ರಿ 7 ಗಂಟೆಗೆ ಟೇಕ್​ ಆಫ್​ಗೆ ಸಿದ್ಧವಾಗುತ್ತಿತ್ತು. ಆದರೆ ಅಷ್ಟರಲ್ಲಾಗಲೇ ಪ್ರಯಾಣಿಕನೋರ್ವ ವಿಮಾನದಿಂದ ಹೊರಹೋಗಲು ಹಾರುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. 

ಮೊದಲಿಗೆ ಕಾಕ್​​ಪಿಟ್​ನೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಈ ಪ್ರಯಾಣಿಕ ಬಳಿಕ ಸರ್ವೀಸ್​​ ಡೋರನ್ನು ತೆಗೆಯಲು ಸಫಲನಾಗಿ, ಎಮರ್ಜೆನ್ಸಿ ಸ್ಲೈಡ್​​ನ ಮೂಲಕ ಟರ್ಮಾಕ್​ಗೆ ಹಾರಿದ್ದಾನೆ. ಟ್ಯಾಕ್ಸಿವೇ ತಲುಪಿದ ಈ ಪ್ರಯಾಣಿಕನನ್ನು ಬಂಧಿಸಿ, ತದನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತನ ಜೀವಕ್ಕೆ ಅಪಾಯವಾಗುವಂಥ ಯಾವುದೇ ಏಟು ದೇಹಕ್ಕಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99