-->

ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಬಾಕಿ ಉಳಿದ ಹತ್ತಿ: ಠಾಣೆಯ ಮೆಟ್ಟಿಲೇರಿದ ಪತಿ

ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಬಾಕಿ ಉಳಿದ ಹತ್ತಿ: ಠಾಣೆಯ ಮೆಟ್ಟಿಲೇರಿದ ಪತಿ


ಗುರುಗ್ರಾಮ: ಗರ್ಭಿಣಿಯೋರ್ವಳ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಗುವನ್ನು ಹೊರತೆಗೆದು ಹೊಟ್ಟೆಯಲ್ಲೇ ಹತ್ತಿ ಚೂರನ್ನು ಬಿಟ್ಟಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಬಳಿಕ ತಪ್ಪಿನ ಅರಿವಾಗಿ ಮರು ಆಪರೇಷನ್​ ಮಾಡಿದ ನಂತರ ಮಹಿಳೆ ಮೇಲೆ ಏಳಲೇ ಇಲ್ಲ ಎಂದು ಆರೋಪಿಸಲಾಗಿದೆ. 

ಮಹಿಳೆಗೆ ಇತ್ತೀಚೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಕೆಯನ್ನು ತಪಾಸಣೆ ನಡೆಸಿದ ವೈದ್ಯರು ಸಾಮಾನ್ಯ​ ಹೆರಿಗೆ ಸಾಧ್ಯವಿಲ್ಲ ಎಂದು, ಶಸ್ತ್ರಚಿಕಿತ್ಸೆ ನಡೆಸಿಯೇ ಮಗುವನ್ನು ಹೊರತೆಗೆಯಬೇಕೆಂದು ತಿಳಿಸಿದ್ದಾರೆ. ಅದರಂತೆ ಶಸ್ತ್ರಚಿಕಿತ್ಸೆ ಮೂಲಕ​ ಮಗುವನ್ನು ಹೊರತೆಗೆಯಲಾಗಿದೆ. ಬಳಿಕ ತಾಯಿ ಮಗುವನ್ನು ಡಿಸ್ಚಾರ್ಜ್​ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲಾಗಿದೆ.

ಆದರೆ ಮನೆಗೆ ತೆರಳಿದ ಒಂದೆರೆಡು ದಿನಗಳಲ್ಲಿ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಪರೇಷನ್​ ಮಾಡಿದ್ದ ವೈದ್ಯರಿಗೆ ಕೇಳಿದರೆ ಮಾತ್ರೆ ಕೊಟ್ಟು ಕಳುಹಿಸಿದ್ದಾರೆ. ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಬೇರೊಬ್ಬ ವೈದ್ಯರ ಸಲಹೆಯಂತೆ ಅಲ್ಟ್ರಾಸೌಂಡ್​ ಮಾಡಿಸಲಾಗಿದೆ. ಆಗ ಹೊಟ್ಟೆಯೊಳಗೆ ಹತ್ತಿಯಿರುವುದು ಕಂಡುಬಂದಿದೆ. ತಕ್ಷಣ ಬಾಣಂತಿಯ ಕುಟುಂಬಸ್ಥರು ಆಪರೇಷನ್​ ಮಾಡಿದ್ದ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ. ಮೊದಲಿಗೆ ವೈದ್ಯರು ತಪ್ಪೊಪ್ಪಿಕೊಂಡಿಲ್ಲವಾದರೂ ರಿಪೋರ್ಟ್​ ತೋರಿಸಿದ ಬಳಿಕ ಒಪ್ಪಿಕೊಂಡಿದ್ದಾರೆ. ಬಾಣಂತಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ. 

ಬಾಣಂತಿ ಆಸ್ಪತ್ರೆಗೆ ದಾಖಲಾದ ಬಳಿಕ ಕುಟುಂಬಸ್ಥರ ಅನುಮತಿ ಇಲ್ಲದೆಯೇ ಮತ್ತೊಮ್ಮೆ ಆಪರೇಷನ್​ ಮಾಡಲಾಗಿದೆಯೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆ ಆಪರೇಷನ್​ ಆದಾಗಿನಿಂದ ಆಕೆ ಮೇಲೆ ಎದ್ದಿಲ್ಲವೆಂದೂ ಹೇಳಲಾಗಿದೆ. ಸದ್ಯ ಈ ವಿಚಾರವಾಗಿ ಬಾಣಂತಿಯ ಪತಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99