
BIRTHDAY ಪಾರ್ಟಿಗೆಂದು ತೆರಳಿದ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್: ಗೆಳೆಯರು ಸೇರಿ ಅಪರಿಚಿತರಿಂದ ದುಷ್ಕೃತ್ಯ
Sunday, June 6, 2021
ಮುಂಬೈ: ಬರ್ತ್ ಡೇ ಪಾರ್ಟಿಗೆಂದು ಮನೆಯಿಂದ ಹೊರಗಡೆ ಬಂದಿರುವ 16ರ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆದ ಘಟನೆ ಮೇ 31ರಂದು ಮುಂಬೈನಲ್ಲಿ ನಡೆದಿದೆ. ಆರೋಪಿಗಳೆಲ್ಲರೂ 18 ರಿಂದ 23 ವಯೋಮಾನದವರು ಎಂದು ಹೇಳಲಾಗಿದೆ. ವಿಪರ್ಯಾಸವೆಂದರೆ ಬಾಲಕಿ ಸಹಾಯ ಯಾಚಿಸಿದ ಗೆಳೆಯರೂ ಕೂಡಾ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.
ಮೇ 31ರಂದು ಗೆಳೆಯನ ಬರ್ತ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಸಂತ್ರಸ್ತೆ ಮನೆಯಿಂದ ಹೊರಬಂದಿದ್ದಾಳೆ. ಈ ಸಂದರ್ಭ ಕಾರಿನಲ್ಲಿ ಬಂದು ನಾಲ್ವರು ಅಪರಿಚಿತರು ಆಕೆಯನ್ನು ಕಾರೊಳಗೆ ಎಳೆದುಕೊಂಡು ರೇಪ್ ಮಾಡಿದ್ದಾರೆ. ಇಬ್ಬರು ಕಾರಿನ ಹೊರಗಡೆ ನಿಂತು ಯಾರಾದರೂ ಬರುತ್ತಾರೋ ಎಂದು ಕಾವಲು ಕಾಯುತ್ತಿದ್ದರು. ಬಳಿಕ ದುಷ್ಕರ್ಮಿಗಳು ಬಾಲಕಿಯನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾದಾಗಿದ್ದಾರೆ.
ರಾತ್ರಿಯಾಗಿದ್ದರಿಂದ ಹೆದರಿದ ಸಂತ್ರಸ್ತೆ, ಮನೆಗೆ ಹೋಗಲು ಆಗದೆ ಸಹಾಯ ಕೋರಿ ತನ್ನ ಸ್ನೇಹಿತನ ಮನೆಗೆ ತೆರಳಿದ್ದಾಳೆ. ಈ ವೇಳೆ ಸ್ನೇಹಿತನೂ ಸಹ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮತ್ತೊಬ್ಬ ಸ್ನೇಹಿತನ ಮನೆಗೆ ತೆರಳಿ ಸಹಾಯ ಕೇಳಿದ್ದಾಳೆ ಆತನೂ ಮೇಲೆ ರೇಪ್ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಮಗಳು ಮನೆಗೆ ಬಾರದಿದ್ದಾಗ ಪಾಲಕರು ಆ ರಾತ್ರಿಯೇ ಮಾಲ್ವಾನಿ ಪೊಲೀಸ್ ಠಾಣೆಗೆ ತೆರಳಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಜೂನ್ 1ರಂದು ಹುಡುಗಿ ಮನೆಗೆ ಹಿಂದಿರುಗಿದ್ದಾಳೆ. ಮನೆಗೆ ಬಂದ ಸಂತ್ರಸ್ತೆ ತನ್ನ ಪೋಷಕರಿಗೆ ನಡೆದಿದ್ದನ್ನು ವಿವರಿಸಿದ್ದಾಳೆ. ತಕ್ಷಣ ಆಕೆಯ ತಾಯಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಸಂಬಂಧ ಶುಕ್ರವಾರ ಮತ್ತು ಶನಿವಾರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಹಿಂತೆ (ಐಪಿಸಿ) ಮತ್ತು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಹುಡುಗಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಇದೀಗ ಪೊಲೀಸ್ ತನಿಖೆ ಪ್ರಗತಿಯಲ್ಲಿರುವುದಾಗಿ ಮುಂಬೈ ಪೊಲೀಸ್ ವಕ್ತಾರ ಚೈತನ್ಯ ಎಸ್ ಮಾಹಿತಿ ನೀಡಿದ್ದಾರೆ.