-->

ವರ್ಷವೊಂದರಲ್ಲೇ 20 ಮಕ್ಕಳಿಗೆ ಅಮ್ಮನಾದ 23ರ ಯುವತಿ: ಇನ್ನೂ ಮಕ್ಕಳು ಬೇಕೆನ್ನುತ್ತಾಳೆ ಈ ಬೆಡಗಿ! (Video)

ವರ್ಷವೊಂದರಲ್ಲೇ 20 ಮಕ್ಕಳಿಗೆ ಅಮ್ಮನಾದ 23ರ ಯುವತಿ: ಇನ್ನೂ ಮಕ್ಕಳು ಬೇಕೆನ್ನುತ್ತಾಳೆ ಈ ಬೆಡಗಿ! (Video)


ಅಟ್ಲಾಂಟಾ: ಅವಳಿ-ಜವಳಿ, ತ್ರಿವಳಿ ಮಕ್ಕಳು ಹುಟ್ಟುವುದು ಸಾಮಾನ್ಯ ಕೇಳಿರುತ್ತೀರುತ್ತೇವೆ. ಆದರೆ  ಜಾರ್ಜಿಯಾದ‌ ದಂಪತಿ ಜೋಡಿಯೊಂದು ವರ್ಷವೊಂದರಲ್ಲೇ ಬರೋಬ್ಬರಿ 20 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಇದು ಹೇಗೆ ಎಂದು ಆಶ್ಚರ್ಯ ಪಡುತ್ತಿದ್ದೀರಾ... ಈ ಸುದ್ದಿ ನೋಡಿ
ಜಾರ್ಜಿಯಾ ದೇಶದ ಕ್ರಿಸ್ಟಿನಾ ಒಜ್ತುರ್ಕ್(23) ಮತ್ತು ಗಾಲಿಪ್​ಗೆ(53) ವರ್ಷವೊಂದರಲ್ಲೇ 20 ಮಕ್ಕಳನ್ನು ಪಡೆದವರು. ಈ ದಂಪತಿಗೆ ಈಗಾಗಲೇ ಆರು ವರ್ಷದ ವಿಕ್ಟೋರಿಯಾ ಹೆಸರಿನ ಮಗಳಿದ್ದಾಳೆ. 

ಕ್ರಿಸ್ಟಿಯಾಗೆ ಮೊದಲಿನಿಂದಲೂ ದೊಡ್ಡ ಕುಟುಂಬ ಮಾಡಿಕೊಳ್ಳಬೇಕೆಂಬ ಬಯಕೆಯಿತ್ತಂತೆ. ತನ್ನ ಬಯಕೆಯನ್ನು ಪೂರೈಸುವ ಭರವಸೆ ಮೇರೆಗೆ ಕೋಟ್ಯಧಿಪತಿ ಗಾಲಿಪ್​​ನನ್ನು ಕ್ರಿಸ್ಟಿಯಾಳು ವಿವಾಹವಾಗಿದ್ದಳಂತೆ. ಕ್ರಿಸ್ಟಿಯಾಳ ದೊಡ್ಡ ಕುಟುಂಬದ ಕನಸು ಈ ವರ್ಷ ನೆರವೇರಿದೆ. ಇದೊಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳು ಕ್ರಿಸ್ಟಿಯಾಳ ಮಡಿಲು ಸೇರಿವೆ. ಅಂದ ಹಾಗೆ ಈ ಎಲ್ಲ ಮಕ್ಕಳು ಬಾಡಿಗೆ ತಾಯಂದಿರಿಗೆ ಹುಟ್ಟಿದ್ದಂತೆ. 

ದಂಪತಿ ಮಕ್ಕಳನ್ನು ಹೆರುವುದಕ್ಕಾಗಿ ಬಾಡಿಗೆ ತಾಯಂದಿರಿಗೆ ಬರೋಬ್ಬರಿ 1.42 ಕೋಟಿ ರೂ. ಖರ್ಚು ಮಾಡಿದ್ದಾರಂತೆ. ಕಳೆದ ವರ್ಷ ಮಾರ್ಚ್​ನಲ್ಲಿ ಮೊದಲ ಬಾಡಿಗೆ ತಾಯಿಯಿಂದ ಮಗು ಪಡೆದ ನಂತರ ಒಂದೊಂದಾಗಿ ಮಕ್ಕಳನ್ನು ಪಡೆಯುತ್ತಾ ಬರಲಾಗಿದೆ. ಈಗ ಕ್ರಿಸ್ಟಿನಾ ಬಳಿ 4 ತಿಂಗಳ ಮಕ್ಕಳಿಂದ ಹಿಡಿದು 14 ತಿಂಗಳ ಮಕ್ಕಳೂ ಇದ್ದಾರೆ. ಈ ಮಕ್ಕಳಿಗೆ ವಾರವೊಂದಕ್ಕೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂ. ಖರ್ಚಾಗುತ್ತದೆಯಂತೆ. ಇವರನ್ನು ನೋಡಿಕೊಳ್ಳಲೆಂದೇ 16 ಜನರನ್ನು ನೇಮಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕ್ರಿಸ್ಟಿನಾ ದಿನದ ಅಷ್ಟೂ ಸಮಯವನ್ನು ಮಕ್ಕಳಿಗಾಗಿಯೇ ಮುಡಿಪಾಗಿಡುತ್ತಾಳಂತೆ. ಇಷ್ಟಕ್ಕೆ ಕುಟುಂಬ ನಿಲ್ಲಿಸುವ ಮನಸ್ಸು ಆಕೆಗಿಲ್ಲವಂತೆ. ಗಾಲಿಪ್​ ಜತೆ ಇನ್ನೊಂದು ಮಗು ಮಾಡಿಕೊಳ್ಳುವ ಆಸೆಯಿದೆ. ನಾನೇ ಗರ್ಭಿಣಿಯಾಗಿ ಮಗುವನ್ನು ಹರಬೇಕೆನ್ನುವ ಮನಸ್ಸಿದೆ. ಈ ಮಕ್ಕಳ ಜತೆ ಕಾಲ ಕಳೆಯುತ್ತಿರುವುದರಿಂದಾಗಿ ಕೆಲ ಸಮಯದ ಬಳಿಕ ಮತ್ತೆ ಗರ್ಭಿಣಿಯಾಗುತ್ತೇನೆ ಎಂದು ಕ್ರಿಸ್ಟಿನಾ ಹುಮ್ಮಸ್ಸಿನಲ್ಲಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99