
ಬಾಲಿವುಡ್ ನಟ ಅಜಯ್ ದೇವಗನ್ ಮನೆ ಖರೀದಿಸಲು ಮಾಡಿದ ಸಾಲವೆಷ್ಟು?
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಮುಂಬೈನ ಜುಹು ಪ್ರದೇಶದಲ್ಲಿ ಬರೋಬ್ಬರಿ 60 ಕೋಟಿ ರೂ ಮೌಲ್ಯದ ಭವ್ಯ ಮನೆಯನ್ನು ಖರೀದಿಸಿದ್ದು, ಈ ಮನೆಗೆ, ಅವರು 18.75 ಕೋಟಿ ರೂ. ಸಾಲ ಮಾಡಿದ್ದಾರಂತೆ.
ಈ ಸಾಲದ ಮೊತ್ತ ಕೇಳಿ ಯಾರಿಗಾದರೂ ಸ್ವಲ್ಪ ತಲೆಬಿಸಿಯಾಗೋದು ಖಂಡಿತಾ. ಆದರೆ, ಅಜಯ್ ದೇವಗನ್ಗೆ ಮಾತ್ರ ಇದು ದೊಡ್ಡ ಮೊತ್ತವಲ್ಲ. ಅವರು ಚಿತ್ರವೊಂದಕ್ಕೆ ಪಡೆಯುವ ಸಂಭಾವನೆಯ ಮೊತ್ತದ ಅರ್ಧದಷ್ಟು ಮಾತ್ರ ಸಾಲಗಾರರಾಗಿದ್ದಾರೆ. ಹಾಗಾಗಿ, ಇದನ್ನು ಬಹಳ ಸುಲಭವಾಗಿ ಅವರು ತೀರಿಸಬಹುದು.
ಕೊರೊನಾ ಹಿನ್ನೆಲೆಯಲ್ಲಿ ಮುಂಬೈನಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ಇಳಿಮುಖವಾಗಿದ್ದು, ಮೊದಲಿನ ವಹಿವಾಟು ಇಲ್ಲ. ಅದನ್ನೇ ಬಂಡವಾಳವಾಗಿಸಿಕೊಂಡ, ಸೆಲೆಬ್ರಿಟಿಗಳು ಕೋಟಿ ಬೆಲೆಬಾಳುವ ಬಂಗಲೆಗಳು ಮತ್ತು ಅಪಾರ್ಟ್ಮೆಂಟ್ಗಳನ್ನು ಕಳೆದ ಕೆಲವು ತಿಂಗಳುಗಳಿಂದ ಖರೀದಿಸುತ್ತಿದ್ದಾರೆ. ಈ ಸಾಲಿಗೆ ಅಜಯ್ ದೇವಗನ್ ಸಹ ಸೇರಿಕೊಂಡಿದ್ದಾರೆ. ಈಗಾಗಲೇ ಮನೆಯ ಫರ್ನಿಚರ್ ಕೆಲಸಗಳು ನಡೆಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ಹೊಸ ಮನೆಯ ಪ್ರವೇಶ ಪಡೆಯಲಿದ್ದಾರೆ.