ಯುವತಿಯರ ಅತ್ಯಾಚಾರ ಪ್ರಕರಣಕ್ಕೆ ಉಡುಪೆ ಕಾರಣ- ಪಾಕ್ ಪ್ರಧಾನಿಯ....
Monday, June 21, 2021
ಇಸ್ಲಮಾಬಾದ್: ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಮಹಿಳೆಯರು ಧರಿಸುವ ಉಡುಗೆಯೇ ಕಾರಣ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇಮ್ರಾನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಹಿಳೆಯರು ತುಂಡುಡುಗೆಯನ್ನು ಧರಿಸಿದರೆ ಅದು ಪುರುಷರ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇದು ಕೇವಲ ಸಾಮಾನ್ಯ ಜ್ಞಾನ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಇಮ್ರಾನ್ ಅವರ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.
ಎಚ್ಬಿಒ ನ ಆಕ್ಸಿಯೊಸ್ ಸಂದರ್ಶನದಲ್ಲಿ ಇಮ್ರಾನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ದಕ್ಷಿಣ ಏಷ್ಯಾ ನ್ಯಾಯಶಾಸ್ತ್ರಜ್ಞರ ಅಂತರರಾಷ್ಟ್ರೀಯ ಆಯೋಗದ ಕಾನೂನು ಸಲಹೆಗಾರ್ತಿ ಆಗಿರುವ ರೀಮಾ ಓಮರ್ ಟ್ವೀಟ್ ಮಾಡಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಾರಣ ನೀಡುವಾಗ ಸಂತ್ರಸ್ತೆ ಅಥವಾ ಬಲಿಪಶುವನ್ನೇ ದೂಷಿಸುವ ಪಾಕ್ ಪ್ರಧಾನಿ ಇಮ್ರಾನ್ ನಡೆ ನಿರಾಶಾದಾಯಕವಾಗಿದೆ ಎಂದಿದ್ದಾರೆ.