
ಅಪ್ರಾಪ್ತ ಬಾಲಕನನ್ನು ಮದುವೆಯಾದ ಯುವತಿಗಾದ ಶಿಕ್ಷೆ ಏನು ಗೊತ್ತಾ...?
ಚಿಕ್ಕಮಗಳೂರು: 20 ವರ್ಷದ ಯುವತಿಯೊಬ್ಬಳು ಫೇಸ್ಬುಕ್ನಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕನನ್ನು ಮದುವೆಯಾಗಿದ್ದು, ಇದೀಗ ಆಕೆ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರಿನ 20 ವರ್ಷದ ಯುವತಿಗೆ ಫೇಸ್ಬುಕ್ ಮೂಲಕ 17 ವರ್ಷದ ಬಾಲಕನ ಪರಿಚಯವಾಗಿತ್ತು. ನಂತರ ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ಇವರಿಬ್ಬರ ಮದುವೆ ಕೂಡ ಮಾಡಲಾಯಿತು.ಈ ಕುರಿತು ಜೂ.23ರಂದು ಮಕ್ಕಳ ಸಹಾಯವಾಣಿ 1098ರ ಮೂಲಕ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು.
ಇದೀಗ ಯುವತಿಯ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.