ಮಂಗಳೂರು;ATM ಕೇಂದ್ರದಲ್ಲಿ ಬಾಕಿಯಾದ ಮಹಿಳೆಯ ಮೊಬೈಲ್ ಕೊಂಡೊಯ್ದ ಮತ್ತೊಬ್ಬ ಗ್ರಾಹಕ- CCTV ವಿಡಿಯೋ ವೈರಲ್
Saturday, June 26, 2021
ಮಂಗಳೂರು; ಎಟಿಎಂ ಕೇಂದ್ರದಲ್ಲಿ ಬಾಕಿಯಾಗಿದ್ದ ಮೊಬೈಲನ್ನು ಯುವಕನೊಬ್ಬ ಕೊಂಡೊಯ್ದ ಘಟನೆ ಕಡಬದಲ್ಲಿ ನಡೆದಿದೆ.
ಕಡಬದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನ ATM ಕೇಂದ್ರಕ್ಕೆ ಮಹಿಳೆಯೊಬ್ಬರು ಹಣ ವಿದ್ ಡ್ರಾ ಮಾಡಲು ಬಂದಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿಯಾಗಿರುವ ರೇಖಾ ಅವರಿಗೆ ATM ಯಂತ್ರದಿಂದ ಹಣ ಬಂದಿರಲಿಲ್ಲ. ಈ ಕಾರಣಕ್ಕಾಗಿ
ಅವರು ಪಕ್ಕದಲ್ಲಿ ಇದ್ದ ಬ್ಯಾಂಕ್ ಸಿಬ್ಬಂದಿಯನ್ನು ಕರೆಯಲು ಬ್ಯಾಂಕಿಗೆ ಹೋಗಿದ್ದರು.ಈ ಸಂದರ್ಭದಲ್ಲಿ ಅವರು ಮೊಬೈಲ್ ನ್ನು ಎಟಿಎಂ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು.ಆದರೆ ವಾಪಾಸು ಬಂದು ನೋಡಿದಾಗ ಮೊಬೈಲ್ ಇಲ್ಲದಿರುವುದು ಗಮನಕ್ಕೆ ಬಂದಿದೆ.
ಮಹಿಳೆ ಬ್ಯಾಂಕ್ ಗೆ ಹೋಗಿ ಸಿಬ್ಬಂದಿಯನ್ನು ಕರೆ ತರುವ ಸಂದರ್ಭದಲ್ಲಿ ಮತ್ತೊಬ್ಬ ಗ್ರಾಹಕ ATM ಗೆ ಬಂದಿದ್ದ. ಸ್ಕೂಟಿಯಲ್ಲಿ ಬಂದ ಯುವಕ ಹೆಲ್ಮೆಟ್ ಧರಿಸಿಯೇ ಎಟಿಎಂ ಪ್ರವೇಶಿಸಿ ಹಣ ಪಡೆದ ಬಳಿಕ ಪಕ್ಕದ ಟೇಬಲ್ ನಲ್ಲಿ ಇರಿಸಿದ್ದ ಮೊಬೈಲನ್ನು ಕೊಂಡೋಗಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.