-->

ಗಂಡನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ ಹೊರ ಹೋದವಳು ಮತ್ತೆ ಸಿಕ್ಕಿದ್ದು ಶವವಾಗಿ..!!

ಗಂಡನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ ಹೊರ ಹೋದವಳು ಮತ್ತೆ ಸಿಕ್ಕಿದ್ದು ಶವವಾಗಿ..!!

 ಭೋಪಾಲ್:  ಗಂಡನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಹೋದವಳು ದೂರದ ಊರಿನ ರೈಲ್ವೆ ಹಳಿ ಬಳಿ ಮಾಂಸದ ತುಂಡಾಗಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. 

 ರೀತು ಎಂಬ ಮಹಿಳೆಗೆ ಮದುವೆಯಾಗಿ ಎರಡು ಮಕ್ಕಳಿದ್ದು, ಗಂಡ ಎಂಬಿಬಿಎಸ್ ಮುಗಿಸಿದ್ದು ಪಿಜಿ ಮಾಡಲೆಂದು ಬಿಹಾರದ ಪಟನಾದಲ್ಲಿ ನೆಲೆಸಿದ್ದ. ಪೋಸ್ಟ್​ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರೀತು ಜೂನ್ 10ರಂದು ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತ ಮನೆಯಿಂದ ಹೊರಬಂದಿದ್ದಾಳೆ. ನಂತರ ಆಕೆ ವಾಪಸು ಮನೆಗೆ ಹೋಗೇ ಇಲ್ಲ. ರೀತು ಕಾಣದಿರುವುದರ ಕುರಿತಾಗಿ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಪರಿಶೀಲನೆ ನಡೆಸಿದಾಗ ರೀತು ಗ್ವಾಲಿಯರ್​ನಿಂದ ಗುನಾಕ್ಕೆ ರೈಲಿನಲ್ಲಿ ಹೊರಟಿದ್ದು ಗ್ವಾಲಿಯರ್ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾಗಳಿಂದ ತಿಳಿದುಬಂದಿದೆ.  ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ರೀತು ಏಕಾಗಿ ಕೊಲೆಯಾದಳು ಎನ್ನುವ ವಿಚಾರ ತನಿಖೆಯಿಂದ ತಿಳಿದುಬರಬೇಕಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99